
ವೇಣೂರು: ಪಶು ಚಿಕಿತ್ಸಾಲಯ, ಜಾನುವಾರು ಅಧಿಕಾರಿ ಸುಕೀರ್ತಿ ಜೈನ್ ಅವರು 39 ವರ್ಷ ಸರ್ಕಾರಿ ಸೇವೆ ನಿರ್ವಹಿಸಿ ವಯೋನಿವೃತಿಯಾದ ಸಂದರ್ಭದಲ್ಲಿ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ಜಿಲ್ಲಾ ಉಪನಿರ್ದೇಶಕ ಡಾ. ಅರುಣ ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು ಬೆಳ್ತಂಗಡಿ ಪಶು ಚಿಕಿತ್ಸಾಲಯದ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ)ಡಾ. ರವಿಕುಮಾರ್, ರಾಜ್ಯ ಸರ್ಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಡಾ. ಜಯಕೀರ್ತಿ ಜೈನ್, ಬೆಳ್ತಂಗಡಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ಪಶು ವೈದ್ಯಕೀಯ ಪರೀಕ್ಷಕರ ಜಿಲ್ಲಾ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಡಾ. ಸಂತೋಷ್ ಗೌಡ, ಡಾ. ಯತೀಶ್, ಡಾ. ವಿನಯ್ ಕುಮಾರ್, ನಿವೃತ್ತ ಜಾನುವಾರು ಅಭಿವೃದ್ಧಿ ಅಧಿಕಾರಿ ಶ್ರೀಧರ್ ಶೆಟ್ಟಿ ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜಾನುವಾರು ಅಧಿಕಾರಿಗಳಾದ ನಾಗಶಯನ, ಪ್ರಶಾಂತ್ ಕುಮಾರ್, ಪಶು ವೈದ್ಯ ಪರೀಕ್ಷಕ ಸದಾಶಿವ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು. ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ ಅವರು ಶುಭಹಾರೈಸಿದರು.