ನಾರಾವಿ ವರ್ಗಾವಣೆಗೊಂಡ ಪ್ರಾಂಶುಪಾಲರಿಗೆ ಬೀಳ್ಕೊಡುಗೆ

0

ನಾರಾವಿ: ಸಂತ ಅಂತೋನಿ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರಾಂಶುಪಾಲರಾಗಿ ಸೇವೆಗೈದ ಡಾ.ಆಲ್ವಿನ್ ಸೆರಾವೋ ಇವರಿಗೆ ಬೀಳ್ಕೊಡುಗೆ ಸಮಾರಂಭ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸ್ವಾ. ಜೆರೋಮ್ ಡಿ’ಸೋಜ ಅವರು ಪ್ರಾಂಶುಪಾಲರಾದ ಡಾ.ಆಲ್ವಿನ್ ಸೆರಾವೋ ಅವರ ಸರಳತೆ, ಮಾನವೀಯ ಗುಣಗಳನ್ನು ಪ್ರಶಂಸಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಸ್ವಾ. ವಾಲ್ಟರ್ ಡಿ’ಮೆಲ್ಲೊ ಭಾಗವಹಿಸಿದ್ದರು. ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಸಂತೋಷ್ ಸಲ್ದಾನ, ಸಂತ ಅಂತೋನಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸಂಜಯ್ ಮಿರಾಂದ, ಕಾರ್ಯದರ್ಶಿ ಎವ್ಜಿನ್ ರೋಡ್ರಿಗಸ್, ಸಿಸ್ಟೆರ್ ಪ್ರೆಸಿಲ್ಲಾ ಅಂದ್ರಾದೆ, ನಾರಾವಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ತುಳುಪುಳೆ, ಸಂತಪಾವ್ಲರ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯಸ್ಥರಾದ ರಿಚರ್ಡ್ ಮೋರಸ್, ಸಂತಾಪಾವ್ಲರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಸೋಫಿಯಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕರಾದ ದಿನೇಶ್ ಬಿ.ಕೆ. ಬಳಂಜ ಪ್ರಾಂಶುಪಾಲರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ಪೋಷಕರ ಪರವಾಗಿ ಶ್ರೀರಂಗಮಯ್ಯ ಮಾತನಾಡಿದರು. ಉಪಪ್ರಾಂಶುಪಾಲರಾದ ಸಂತೋಷ್ ಸಲ್ಡಾನ ಎಲ್ಲರನ್ನು ಸ್ವಾಗತಿಸಿದರು. ಉಪನ್ಯಾಸಕಿ ಸೋನಿಯಾ ಡಿ’ಸೋಜಾ ವಂದನಾರ್ಪಣೆಗೈದರು. ಪದವಿ ಕಾಲೇಜಿನ ಉಪನ್ಯಾಸಕರಾದ ಅವಿಲ್ ಮೋರಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮಕ್ಕೆ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಹಕಾರವಿತ್ತರು.

LEAVE A REPLY

Please enter your comment!
Please enter your name here