
ಗುರುವಾಯನಕೆರೆಯ: ವಿದ್ಯಾ ಸಾಗರ ಕ್ಯಾಂಪಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಕ್ಸೆಲ್ ಟೆಕ್ನೋ ಸ್ಕೂಲ್ ಗೆ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯಿಂದ ಮಾನ್ಯತೆ ದೊರಕಿದೆ. ಯುಡೈಸ್ ಕ್ರಮಾಂಕ 29244101388 ಆಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯ ಶಿಕ್ಷಣ ಇಲಾಖೆಯ ಶಾಲೆಯನ್ನು ಪ್ರಾರಂಭಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಿ.ಬಿ.ಎಸ್.ಇ ಹಾಗೂ ಐ.ಸಿ.ಎಸ್.ಇ ಸಿಲೆಬಸ್ ಸ್ಕೂಲ್ ಗಳನ್ನು ಕೂಡಾ ಪ್ರಾರಂಭಿಸಲಾಗುವುದು. ಆರನೆಯ ತರಗತಿಯಿಂದ ವಸತಿಯುತ ಶಿಕ್ಷಣವನ್ನು ಕೂಡಾ ನೀಡಲಾಗುವುದು. ಮೆಡಿಕಲ್ ಮತ್ತು ಐ.ಐ.ಟಿ ಫೌಂಡೇಶನ್ ಕ್ಲಾಸ್ ಗಳನ್ನು ನಡೆಸುವ ಮೂಲಕ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಒದಗಿಸಲಾಗುವುದು. ಬೆಳ್ತಂಗಡಿ ತಾಲೂಕಿನ ಎಲ್ಲ ಭಾಗಗಳಿಂದ ಶಾಲಾ ಬಸ್ ಗಳನ್ನು ಕೂಡಾ ಹೊರಡಿಸಲಾಗುವುದು ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ತಿಳಿಸಿದ್ದಾರೆ.