
ಬೆಳ್ತಂಗಡಿ: ತಾಲೂಕಿನ ತೆಂಕಕಾರಂದೂರಿನ ಪೆರೋಡಿತ್ತಾಯ ಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಪ್ರಶಾಂತ್ ಅವರ ಮಗಳು ಮಾನ್ಯ ಅಂಗವೈಕ್ಯಲ್ಯಕ್ಕೆ ತುತ್ತಾಗಿದ್ದು, ಕೈಕಾಲುಗಳು ಸ್ವಾಧೀನ ಇಲ್ಲದೆ ಇರುವುದರಿಂದ ಸದಾ ಮಗುವಿನ ಆರೈಕೆ ಮಾಡಿಕೊಂಡಿರಬೇಕಾದ ಪರಿಸ್ಥಿತಿ. ಮಗುವಿನ ಚಿಕಿತ್ಸೆಗೆ ಹಾಗೂ ಇನ್ನಿತರ ಖರ್ಚುಗಳಿಗೆ ಸಹಾಯಧನ ನೀಡಿ ಎಂದು ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿ 15,000/- ರೂಪಾಯಿಗಳ ಸಹಾಯಧನದ ಚೆಕ್ ನ್ನು ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿಸಿರೋಡ್ ಇದರ ಪ್ರಧಾನ ಅರ್ಚಕ ರಘುಪತಿ ಭಟ್ ಅವರ ಮೂಲಕ ಹಸ್ತಾಂತರ ಮಾಡಲಾಯಿತು. ತಂಡದ ಅಧ್ಯಕ್ಷ ಸಂದೀಪ್ ಮಿಜಾರ್, ಉಪಾಧ್ಯಕ್ಷ ಚಂದ್ರಶೇಖರ ಸರಪಾಡಿ, ಸೇವಾ ಮಾಣಿಕ್ಯ ಸತೀಶ್ ಸುವರ್ಣ ಬಂಟ್ವಾಳ್ ಉಪಸ್ಥಿತರಿದ್ದರು.