
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹೆಣ ಹೂತಿಟ್ಟಿದ್ದೇನೆಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.30ರಂದು ಎಸ್. ಐ. ಟಿಯಿಂದ ಮಹತ್ವದ ಕಾರ್ಯ ನಡೆಯಲಿದೆ. ಮುಸುಕುಧಾರಿಯನ್ನು ಕರೆದುಕೊಂಡು ಅಸ್ಥಿಪಂಜರ ಹೊರತೆಗೆಯುವ ಕಾರ್ಯದ ಘಟನಾ ಸ್ಥಳಕ್ಕೆ ಎಸ್. ಐ. ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಹಾಗೂ ತಂಡದ ತನಿಖಾಧಿಕಾರಿ ಡಿಐಜಿ ಎಂ.ಎನ್. ಅನುಚೇತ್, ಜೀತೇಂದ್ರ ದಯಾಮ ಭೇಟಿ ನೀಡಿದ್ದಾರೆ.