
ಕಣಿಯೂರು: ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಕಣಿಯೂರು ಮತ್ತು ಸಾರ್ವಜನಿಕರ ವತಿಯಿಂದ ನಡೆಯುವ 46ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಜು. 29ರಂದು ನಾಗರಪಂಚಮಿಯ ಶುಭದಿನದಂದು ಟ್ರಸ್ಟ್ ನ ಕಟ್ಟಡದಲ್ಲಿ ನಡೆಯಿತು.
ಟ್ರಸ್ಟ್ ನ ಪದಾಧಿಕಾರಿಗಳು ಗೌರವ ಸಲಹೆಗಾರರು ಟ್ರಸ್ಟಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ನೆರೆದವರಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಟ್ರಸ್ಟ್ ನ ಸದಸ್ಯರು ಕೊಡುಗೈ ದಾನಿ ಪದ್ಮನಾಭ ಶಿಲ್ಪಿ ಪಿಲಿಗೂಡು ಅವರು ನೀಡಿ ಸಹಕರಿಸಿದರು. ಟ್ರಸ್ಟ್ ನ ಅದ್ಯಕ್ಷ ಯಶೋಧರ ಶೆಟ್ಟಿ ಕಣಿಯೂರು ನೆರೆದವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ಟ್ರಸ್ಟ್ ನ ಕಾರ್ಯದರ್ಶಿ ಸುಕೇಶ್ ಗೌಡ ಬರೆಮೇಲು ಎಲ್ಲರಲ್ಲೂ ಕಾರ್ಯಕ್ರಮ ಯಶಸ್ಸಿಗೆ ಸಹಕಾರ ಕೋರಿ ಧನ್ಯವಾದ ಸಮರ್ಪಿಸಿದರು.