ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಗಿಡ ನಾಟಿ ಹಾಗೂ ಶಾಲಾ ಕೈತೋಟ ರಚನೆ

0

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಗಿಡ ನಾಟಿ ಹಾಗೂ ಶಾಲಾ ಕೈತೋಟ ರಚನೆ ಕಾರ್ಯಕ್ರಮ ಮಡಂತ್ಯಾರು ರೋಟರಿ ಕ್ಲಬ್ ನ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದು, ಮಡಂತ್ಯಾರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಭಾಗವಹಿಸಿ ಸಹಕರಿಸಿದರು.

ರೋಟರಿ ಕ್ಲಬ್ ನ ಅಧ್ಯಕ್ಷ ಮೆಕ್ಸಿಂ ಅಲ್ಬುಕರ್ಕ್, ಕಾಂತಪ್ಪ ಗೌಡ, ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಅನಿತಾ ಬರೋಟ್ಟ, ಕಾರ್ಯಕ್ಷೇತ್ರ ದ ಸೇವಾ ಪ್ರತಿನಿಧಿ ಭಾರತಿ, ಶೌರ್ಯ ಸಂಯೋಜಕಿ ಹರಿಣಾಕ್ಷಿ ಉಪಸ್ಥಿತರಿದ್ದರು.ಶೌರ್ಯ ಸ್ವಯಂ ಸೇವಕರಾದ ಭರತ್ ಕುಮಾರ್, ದೀಪಕ್ ಹಾರಬೆ, ಪುರುಷೋತ್ತಮ ಪುಂಜಾಲಕಟ್ಟೆ, ಯೋಗೀಶ್ ಕುಮಾರ್, ಸುಜೀತ್ ಕುಮಾರ್, ರಾಜೇಶ್ವರಿ, ಶಕುಂತಳಾ, ಸತೀಶ್ ಆಚಾರ್ಯ ಶ್ರಮದಾನ ದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here