
ಕೊಕ್ಕಡ: ಮಾಯಿಲಕೋಟೆ ಸೀಮೆ ದೈವಸ್ಥಾನದ ನಾಗನಕಟ್ಟೆಯಲ್ಲಿ ಜು.29ರಂದು ನಾಗರಪಂಚಮಿಯು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಹಣ್ಣುಕಾಯಿ, ಪಂಚಮಾಮೃತ ಅಭಿಷೇಕ, ನಾಗತಂಬಿಲ ಸೇವೆಗಳು ನಡೆಯಿತು. ವೈದಿಕ ವಿಧಿವಿಧಾನಗಳನ್ನು ಅರ್ಚಕ ಸುರೇಶ್ ಮುಂಚ್ಚಿತ್ತಾಯ ಅವರ ನೇತೃತ್ವದಲ್ಲಿ ನೆರವೇರಿಸಿದರು.
ದೈವಸ್ಥಾನ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಾಂತರಾಮ ಎ ನ್ಯೂ ಆರಿಗ, ದಾಮೋದರ ಗೌಡ ನ್ಯೂ ಆರಿಗ, ದೈವದ ಪರಿಚಾರಕರು, ಟ್ರಸ್ಟ್ ನ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.