
ಬೆಳ್ತಂಗಡಿ: ಜು.28ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಾ. ಜೋಸೆಫ್ ಎನ್.ಎಂ. ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದು ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದಲ್ಲಿ ಮೌಲ್ಯವರ್ಧನೆಯ ಬಗ್ಗೆ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರು ಪ್ರೊ. ಸುರೇಶ್ ವಿ. ಅಧ್ಯಕ್ಷತೆಯನ್ನು ವಹಿಸಿದ್ದು ವಿದ್ಯಾರ್ಥಿಗಳಿಗೆ ಕಾಲೇಜಿನ ಎಲ್ಲಾ ನೀತಿ ನಿಯಮಗಳನ್ನು ವಿವರಿಸಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಪರಿಚಯಿಸಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಧಾಕೃಷ್ಣ, ದೈಹಿಕ ಶಿಕ್ಷಣದ ಬಗ್ಗೆ, ಪ್ರೊ. ರಶ್ಮಿ, ಉದ್ಯೋಗ ಮಾಹಿತಿ ಕೋಶದ ಬಗ್ಗೆ, ಡಾಕ್ಟರ್ ರವಿ ಎಂ. ಎನ್. ಕಾಲೇಜಿನಲ್ಲಿ ಹೊಸದಾಗಿ ಪ್ರಾರಂಭಿಸಿದ AEDP(ಬಿಕಾಂ) ಪದವಿ ತರಗತಿಗಳ ಬಗ್ಗೆ, ದಿವ್ಯ ರಾಜ್ ಕಚೇರಿ ವಿಷಯಗಳ ಬಗ್ಗೆ ಮತ್ತು ಡಾ. ಕುಶಾಲಪ್ಪ IQAC ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಡಾ. ರಾಜೇಶ್ವರಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಹರ್ಷಿತ ಮತ್ತು ತಂಡದ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಪ್ರೊ. ಮಾರುತಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ. ನವೀನ್ ವಂದಿಸಿದರು.