ರಂಜಿತ್ ಎಚ್.ಡಿ. ಬಳಂಜರವರಿಗೆ ಜೆಸಿಯ ವಲಯ 15ರ ಸಾಧನಾ ಶ್ರೀ ಪ್ರಶಸ್ತಿ

0

ಬೆಳ್ತಂಗಡಿ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಜೆಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನವು ಜೆಸಿಐ ಮಡoತ್ಯಾರು ಘಟಕದ ಆತಿಥ್ಯದಲ್ಲಿ ಸೆಕ್ರೆಡ್ ಹಾರ್ಡ್ ಚರ್ಚ್ ಹಾಲ್ ನಲ್ಲಿ ನಡೆಯಿತು.

ಪ್ರಸ್ತುತ ಸಾಲಿನ ವಲಯ ಉಪಾಧ್ಯಕ್ಷ, ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನಿಕಟ ಪೂರ್ವಧ್ಯಕ್ಷ ಜೆಸಿ ರಂಜಿತ್ ಎಚ್.ಡಿ.ಬಳಂಜ ಅವರು ವ್ಯವಹಾರ ಸಮೇಳನದಲ್ಲಿ ತನ್ನ ವೃತ್ತಿ ಕ್ಷೇತ್ರ ಮತ್ತು ಜೆಸಿಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡು ಸಲ್ಲಿಸಿರುವ ಸೇವೆಗಾಗಿ ವಲಯ 15 ರಿಂದ ಕೊಡಮಾಡುವ 2025 ನೇ ಸಾಲಿನ ಪ್ರತಿಷ್ಟಿತ ಸಾಧನಾಶ್ರೀ ಪ್ರಶಸ್ತಿ ಯನ್ನು ಸ್ವೀಕರಿಸಿದರು.

2015ರಲ್ಲಿ ಜೆಸಿಐ ಬೆಳ್ತಂಗಡಿಯ ಮೂಲಕ ಜೆಸಿಐ ಸಂಸ್ಥೆಗೆ ಸೇರ್ಪಡೆಗೊಂಡ ಇವರು 2017ರಲ್ಲಿ ಕಾರ್ಯದರ್ಶಿಯಾಗಿ, ವಲಯ ತರಬೇತುದಾರರಾಗಿ, 2024ರಲ್ಲಿ ಘಟಕ ಅಧ್ಯಕ್ಷರಾಗಿ ತಾಲೂಕಿನಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಮಾಡುದರೊಂದಿಗೆ ಕಳೆದ ವರ್ಷದ ವಲಯ ಸಮ್ಮೇಳನದಲ್ಲಿ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿಯೊಂದಿಗೆ ಪುರಸ್ಕೃತಗೊಂಡಿದ್ದರು.

ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾಗಿ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿಯ ನಿರ್ದೇಶಕರಾಗಿ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಮಿತಿ, ಬಳಂಜದ ಜೊತೆ ಕಾರ್ಯದರ್ಶಿಯಾಗಿ, ಹಳೆ ವಿದ್ಯಾರ್ಥಿ ಸಂಘ ಬಳಂಜ ಮತ್ತು ಬಳಂಜ ವಾಲಿಬಾಲ್ ಕ್ಲಬ್ ನೊಂದಿಗೆ ಕಾರ್ಯನಿರ್ವಹಿಸಿ, ಸೇವೆ ಸಲ್ಲಿಸಿದ ಅನುಭವವಿದೆ.

ಪ್ರಸ್ತುತ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್ (MITE) ಮೂಡಬಿದ್ರಿಯಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಅಭಿಲಾಶ್ ಬಿ.ಎ., ಪೂರ್ವ ವಲಯ ಅಧ್ಯಕ್ಷರಾದ ಸಂಪತ್ ಬಿ. ಸುವರ್ಣ, ಕಾರ್ತಿಕೇಯ ಮಧ್ಯಸ್ಥ, ಗಿರೀಶ್ ಎಸ್.ಪಿ., ರಾಕೇಶ್ ಕುಂಜೂರು, ವಲಯ ಉಪಾಧ್ಯಕ್ಷರಾದ ಸಂತೋಷ್ ಶೆಟ್ಟಿ, ಸುಹಾಸ್ ಮರಿಕೆ, ಪ್ರಶಾಂತ್ ಕುಮಾರ್, ಅನ್ವೇಶ್ ಶೆಟ್ಟಿ, ವ್ಯವಹಾರ ವಿಭಾಗದ ನಿರ್ದೇಶಿಕ ಅಶೋಕ್ ಗುಂಡಿಯಲ್ಕೆ, ಮಡಂತ್ಯಾರ್ ಘಟಕದ ಅಧ್ಯಕ್ಷೆ ಅಮಿತಾ ಅಶೋಕ್, ವಿಕೇಶ್ ಮಾನ್ಯ, ಬೆಳ್ತಂಗಡಿ ಘಟಕದ ಅಧ್ಯಕ್ಷೆ ಆಶಾಲತಾ ಪ್ರಶಾಂತ್, ಪೂರ್ವ ಅಧ್ಯಕ್ಷರಾದ ತುಕಾರಾಂ, ನಾರಾಯಣ ಶೆಟ್ಟಿ, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ್ ಲಾೖಲ, ಅಭಿನಂದನ್ ಹರೀಶ್ ಕುಮಾರ್, ಕಾರ್ಯದರ್ಶಿ ಪ್ರಮೋದ್ ಕೆ., ಶ್ರುತಿ ರಂಜಿತ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here