
ಬೆಳ್ತಂಗಡಿ: ಅರಣ್ಯ ಪ್ರದೇಶದ ಚಾರ್ಮಾಡಿ ಘಾಟ್ ಪ್ರದೇಶದ ರಸ್ತೆಯಲ್ಲಿ ಸಂಚರಿಸುವಾಗ ವನ್ಯಜೀವಿಗಳು ಸಂಚರಿಸುವುದರಿಂದ ಅಪಾಯಗಳು ಹೆಚ್ಚಾಗುವುದು ಕಂಡುಬರುತ್ತಿದ್ದು ಇದನ್ನು ತಪ್ಪಿಸಲು ಜು.28ರಂದು ಅರಣ್ಯ ಇಲಾಖೆಯಿಂದ ಸೂಚನಾ ಫಲಕವನ್ನು ಅಳವಡಿಸಲಾಗಿದೆ.
ವಾಹನ ಚಾಲಕರು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಸೂಚನ ಫಲಕದಲ್ಲಿ ರಸ್ತೆಯು ವನ್ಯಪ್ರಾಣಿಗಳ ಓಡಾಟವಿರುವ, ಮೀಸಲು ಅರಣ್ಯದ ಮೂಲಕ ಹಾದುಹೋಗುವ ರಸ್ತೆಯಾಗಿದೆ. ರಸ್ತೆಯ ನಡುವೆ ವಾಹನ ನಿಲ್ಲಿಸುವಂತಿಲ್ಲ. ಪ್ಲಾಸ್ಟಿಕ್ ಮುಂತಾದ ಹಾನಿಕಾರಕ ವಸ್ತುಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಎಸೆಯುವಂತಿಲ್ಲ. ವನ್ಯಜೀವಿಗಳಿಗೆ ಆಹಾರ ನೀಡುವುದು, ಅವುಗಳ ಜೊತೆ ಫೋಟೋ ತೆಗೆದುಕೊಳ್ಳುವುದು. ವೀಡಿಯೋ ಮಾಡುವುದು, ರೇಗಿಸುವುದು, ಅವುಗಳ ಆವಾಸ ಸ್ಥಾನಕ್ಕೆ ಹಾನಿ, ಇನ್ನಿತರ ಯಾವುದೇ ತೊಂದರೆಗಳನ್ನು ಉಂಟು ಮಾಡುವುದು ಅಪರಾದವಾಗಿದೆ. ಈ ಮೇಲಿನ ಸೂಚನೆಗಳ ಉಲ್ಲಂಘನೆಯಾದಲ್ಲಿ, ಅಂತಹ ವ್ಯಕ್ತಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಂದು ಬರೆಯಲಾಗಿದೆ.