ಧರ್ಮಸ್ಥಳ: ಗ್ರಾಮದಲ್ಲಿ ಹೆಣ ಹೂತಿಟ್ಟೆನೆಂದ ದೂರುದಾರನ ಪ್ರಕರಣ-ಮಹಜರಿನಲ್ಲಿ ಮೊದಲ ದಿನ 13 ಸ್ಥಳ ಗುರುತು-ಪ್ರತಿ ಸ್ಥಳದಲ್ಲಿ ಶಸ್ತ್ರಸಜ್ಜಿತ ತಲಾ ಇಬ್ಬರು ಎ.ಎನ್.ಎಫ್. ಸಿಬ್ಬಂದಿಯಿಂದ ರಾತ್ರಿಯಿಡೀ ಪಹರೆ

0

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ಹೆಣ ಹೂತಿಟ್ಟಿದ್ದೇನೆಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.28ರಂದು ಎಸ್.ಐ.ಟಿಯಿಂದ ಮಹಜರು ಕಾರ್ಯ ಜರುಗಿದ್ದು, ಅನಾಮಿಕ, ಸಾಕ್ಷಿದೂರುದಾರ ತೋರಿಸಿದ್ದ 13 ಸ್ಥಳ ಗುರುತಿಸಲಾಗಿದೆ.

ನೇತ್ರಾವತಿ ಸ್ನಾನಘಟ್ಟದ ಸುತ್ತ 11 ಸ್ಥಳ ಗುರುತು,ಕನ್ಯಾಡಿ ಸಮೀಪ 2 ಸ್ಥಳ ಗುರುತು ಇಂದು (ಜು.28ರಂದು) ಬೆಳಗ್ಗೆಯಿಂದ ಆರಂಭಗೊಂಡ ಮಹಜರು ಪ್ರಕ್ರಿಯೆಯಲ್ಲಿ ಸಾಕ್ಷಿ ದೂರುದಾರ ತೋರಿಸಿರುವ ಹದಿಮೂರು ಸ್ಥಳಗಳನ್ನು ಗುರುತು ಹಾಕಲಾಗಿದೆ.‌ ನೇತ್ರಾವತಿ ಸ್ನಾನಘಟ್ಟ ಸುತ್ತಮುತ್ತ 13 ಸ್ಥಳ ಹಾಗೂ ಕನ್ಯಾಡಿ ಸಮೀಪ‌ ಎರಡು ಸ್ಥಳ ಅಂದ್ರೆ (ನದಿಯ ಮತ್ತೊಂದು ಭಾಗದಲ್ಲಿ)ಗುರುತಿಸಲಾಗುವುದು ಎಂದು ಹೇಳಲಾಗಿದೆ.

ಗುರುತು ಮಾಡಿರುವ ಸ್ಥಳದಲ್ಲಿ ತಲಾ ಇಬ್ಬರು ಶಸ್ತ್ರಸಜ್ಜಿತ ಎ.ಎನ್. ಎಫ್ ಸಿಬ್ಬಂದಿಯಿಂದ ರಾತ್ರಿಯಿಡೀ ಪಹರೆ ಸಾಕ್ಷಿ ದೂರುದಾರ ಗುರುತಿಸಿರುವ ಹದಿನೈದು ಸ್ಥಳದಲ್ಲೂ ಶಸ್ತ್ರಸಜ್ಜಿತ ಎ.ಎನ್.ಎಫ್. ಸಿಬ್ಬಂದಿಯನ್ನು ಪಹರೆಗೆ ನಿಯೋಜಿಸಲಾಗಿದೆ. ಪ್ರತಿ ಸ್ಥಳದಲ್ಲಿ ತಲಾ ಇಬ್ಬರು ಸಿಬ್ಬಂದಿಯನ್ನು ರಾತ್ರಿಯಿಡೀ ಪಹರೆಗೆ ನಿಯೋಜಿಸಲಾಗಿದೆ.

ಹೀಗೆ ಮೊದಲ ದಿನದ ಮಹಜರು ಪ್ರಕ್ರಿಯೆ ಮುಗಿದಿದ್ದು, ಎರಡನೇ ದಿನವೂ ಮುಂದುವರೆಯುವ ಸಾಧ್ಯತೆಯಿದೆ.‌ ನಾಳೆ ಎಸಿ ಅಥವಾ ತಹಶೀಲ್ದಾರ್ ಸಮ್ಮುಖದಲ್ಲಿ ಅಗೆಯುವ ಕಾರ್ಯ ನಡೆಯುವ ಸಾಧ್ಯತೆಯೂ ಇದೆ.

LEAVE A REPLY

Please enter your comment!
Please enter your name here