
ಬೆಳ್ತಂಗಡಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಚಾರ ಭಾಗ್ಯದಿಂದ ರಾಜ್ಯವು ದಿವಾಳಿಯತ್ತ ಸಾಗುತ್ತಿರುವುದರಿಂದ ಅಭಿವೃದ್ಧಿ ಮರೀಚಿಕೆಯಾಗಿದ್ದು,ರಸ್ತೆ ನಿರ್ಮಾಣ ಮಾತ್ರವಲ್ಲದೆ ಕನಿಷ್ಠ ರಸ್ತೆ ನಿರ್ವಹಣೆಗೆ ಕೂಡ ಅನುದಾನ ನೀಡದೆ ಇರುವುದರಿಂದ ನಾಗರೀಕರಿಗೆ ಸಂಚಾರಕ್ಕೆ ಯಾವುದೇ ತೊಂದರೆಯಾಗಬಾರದೆಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಜು. 27 ರಂದು ಪಡಂಗಡಿ- ಸೋಣಂದೂರು- ಮಾಲಾಡಿ ಬಿಜೆಪಿ ಗ್ರಾಮ ಸಮಿತಿಯಿಂದ ನಡೆದ ಗರ್ಡಾಡಿ-ಸೋಣಂದೂರು – ಮಾಲಾಡಿ ಕೊಲ್ಪೆದಬೈಲು ಸಂಪರ್ಕ ರಸ್ತೆ ಸ್ವಚ್ಛತಾ ಕಾರ್ಯದಲ್ಲಿ ಜೊತೆಗೂಡಿ ನಡೆಸಲಾದ ಶ್ರಮದಾನದಲ್ಲಿ ಭಾಗಿಯಾಗಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬೇಸರ ವ್ಯಕ್ತಪಡಿಸಿದರು.

ಮಾಲಾಡಿ ಸೋಣಂದೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ, ಪಂಚಾಯತ್ ಸದಸ್ಯರುಗಳಾದ ದಿನೇಶ್ ಕರ್ಕೇರ, ರಾಜೇಶ ಕೊಡ್ಯೇಲು, ಮಾಲಾಡಿ ಪಂಚಾಯತ್ ಸದಸ್ಯೆ- ಮಂಡಲ ಬಿಜೆಪಿ ಮಹಿಳಾಮೋರ್ಚಾದ ಪ್ರಧಾನ ಕಾರ್ಯದರ್ಶಿ ತುಳಸಿ ಉಮೇಶ್, ಸೋಣಂದೂರು ಬಿಜೆಪಿ ಬೂತ್ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ಮಡಂತ್ಯಾರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಸುರೇಶ್, ಧನಲಕ್ಷ್ಮಿ ಚಂದ್ರಶೇಖರ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.