
ಧರ್ಮಸ್ಥಳ:ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣ ತನಿಖೆಗೆ ಧರ್ಮಸ್ಥಳಕ್ಕೆ ಆಗಮಿಸಿದ ಎಸ್.ಐ.ಟಿ. ತಂಡದ ಅಧಿಕಾರಿ ಜಿತೇಂದ್ರ ದಯಾಮ ಠಾಣೆಯಿಂದ ಕೇಸ್ ಫೈಲ್ ಪಡೆದು ವಾಪಾಸಾಗಿದ್ದಾರೆ. ಜುಲೈ 25ರಂದು ರಾತ್ರಿ 9.30ಕ್ಕೆ ಠಾಣೆಗೆ ಆಗಮಿಸಿದ ದಯಾಮ 1.30ಗಂಟೆ ಠಾಣೆಯಲ್ಲಿದ್ದರು.
ಫೈಲ್ ಪಡೆಯುವ ಮುನ್ನ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಮರ್ಥ್ ಗಾಣಿಗೇರ್ ರವರೊಂದಿಗೆ ಕೇಸ್ ಬಗ್ಗೆ ಮಾಹಿತಿ ಪಡೆದರು. ಕೇಸ್ ಫೈಲ್ ಪಡೆದ ನಂತರ ಎಸ್.ಐ.ಟಿ ಅದರ ಅಧ್ಯಯನ ನಡೆಸಿ ನಂತರ ಕಾರ್ಯೋನ್ಮುಖವಾಗುವ ಸಾಧ್ಯತೆಯಿದೆ. ಡಿ.ವೈ.ಎಸ್.ಪಿ. ಲೋಕೇಶ್, ಇನ್ಸ್ ಪೆಕ್ಟರ್ ಮಂಜುನಾಥ್ ಜೊತೆಗಿದ್ದರು.