
ಬೆಳ್ತಂಗಡಿ: ತಾಲೂಕು ತೆಕ್ಕಾರು ಗ್ರಾಮದಲ್ಲಿ ಜು.25ರಂದು ಸುರಿದ ಭಾರಿ ಮಳೆಗೆ ಬಹಳಷ್ಟು ಹಾನಿಯಾಗಿರುತ್ತದೆ. ಆರು ವಿದ್ಯುತ್ ಕಂಬಗಳು ಮುರಿದು ಬಿದ್ದಿರುತ್ತದೆ. ಹಾಗೂ ಮನೆಗಳಿಗೂ ಹಾನಿಯಾಗಿರುತ್ತದೆ.
ಆನಲ್ಕೆ ಬೇಬಿ ಎಂಬವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮನೆಯಲ್ಲಿ ಇದ್ದ ಲಲಿತ ಹಾಗೂ ಗಾಯತ್ರಿ ಎಂಬವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಫಿಗುಡ್ದೆ ಹುಸೇನ್ ಎಂಬುವರ ಮನೆಗೆ ಅಡಿಕೆ ಮರ ಬಿದ್ದು ಮನೆಗೆ ಹಾನಿಯಾಗಿರುತ್ತದೆ ಹಾಗೂ ಮೈಮುನ ಎಂಬವರ ಮನೆಯ ಸೀಟುಗಳು ಹಾರಿ ಹೋಗಿದ್ದು ಹಾಗೂ ಮಾರಮ ರಮೇಶ್ ನಾಯಕರವರ ಸುಮಾರು 50 ಅಡಿಕೆ ಮರಗಳು ನಾಶವಾಗಿರುತ್ತದೆ ಹಾಗೂ ಬಹಳಷ್ಟು ಕಡೆಗಳಲ್ಲಿ ಅಡಿಕೆ ಮರಗಳು ಹಾಗೂ ಮನೆಗಳಿಗೆ ಹಾನಿಯಾಗಿರುತ್ತದೆ.
ವಿದ್ಯುತ್ ಕಂಬ ಮುರಿದ ಕಡೆಗೆ ಮೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿರುತ್ತಾರೆ. ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶೇಖರ್ ಪೂಜಾರಿ ಹಾಗೂ ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಅನ್ವರ್ ಹಾಗೂ ಹಕೀಮ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮಯ್ಯ ಹಾಗೂ ಪಂಚಾಯತ್ ಸಿಬ್ಬಂದಿಗಳು ಘಟನ ಸ್ಥಳಕ್ಕೆ ಭೇಟಿ ನೀಡಿದ್ದಾರೆ.