
ಬೆಳ್ತಂಗಡಿ: “ಮೆಣಸಿನ ರಾಣಿ” ಎಂದೇ ಪ್ರಸಿದ್ದವಾಗಿರುವ ರಾಣಿ ಚೆನ್ನಭೈರಾದೇವಿ ಅವರ ಸ್ಮರಣಾರ್ಥ ಜು.25ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿದರು.

ಕರ್ನಾಟಕದ ಗೇರುಸೊಪ್ಪಿನ ರಾಣಿಯಾಗಿ, ರೈನಾ ಡಾ ಪಿಮೆಂಟಾ ಎಂದು ಪೋರ್ಚುಗೀಸರು ಕರೆಯುತ್ತಿದ್ದ ರಾಣಿ ಚೆನ್ನಭೈರಾದೇವಿ ಕರ್ನಾಟಕದ ಶಕ್ತಿಯ ಹೆಮ್ಮೆಯ ಸಂಕೇತ. 54 ವರ್ಷಗಳ ಕಾಲ ರಾಜ್ಯದ ರಕ್ಷಣೆ, ಪರಂಪರೆ ಮತ್ತಷ್ಟು ಸ್ಫೂರ್ತಿಯಾಗಿದೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮತ್ತು ಪತ್ನಿ, ಮತ್ತಿತರರು ಉಪಸ್ಥಿತರಿದ್ದರು.