
ಶಿಬರಾಜೆ: ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಎಣ್ಣೆ ಗದ್ದೆ ಸಮೀಪ ರಸ್ತೆಯ ಒಂದು ಭಾಗ ಸಂಪೂರ್ಣ ಕುಸಿದಿದ್ದು ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದರು.


ಪ್ರಯೋಜನವಾಗದ ಹಿನ್ನೆಲೆ ಸ್ಥಳೀಯರಾದ ಹೊನ್ನಪ್ಪ ಗೌಡ, ಪದ್ಮನಾಭ, ಲಕ್ಷ್ಮೀನಾರಾಯಣ, ಧರ್ಣಪ್ಪ ಗೌಡ, ವಲಂಬಳ ಹರ್ಷಿತ್, ರಮೇಶ್ ಗೌಡ, ಬಾಬುಗೌಡ ಮತ್ತು ಶೌರ್ಯ ವಿಪತ್ತು ತಂಡದ ಸದಸ್ಯ ಹರೀಶ್ ವಳಗುಡ್ಡೆ ಸೇರಿಕೊಂಡು ಕಲ್ಲಿನ ತಡೆಗೋಡೆ ನಿರ್ಮಿಸಿ ತಾತ್ಕಾಲಿಕವಾಗಿ ಸಮಸ್ಯೆಯನ್ನು ಶಮನಗೊಳಿಸಿದ್ದು, ಇದು ಪಿ.ಡಬ್ಲ್ಯೂ.ಡಿ ರಸ್ತೆಯಾಗಿರುವುದರಿಂದ ಅನೇಕ ವಾಹನಗಳ ಓಡಾಟ, ಶಾಲಾ ವಾಹನ ಗಳ ಓಡಾಟ ಇರುವ ರಸ್ತೆ, ಶೀಘ್ರ ಪಿ.ಡಬ್ಲ್ಯೂ.ಡಿ ಅಧಿಕಾರಿಗಳು ಇತ್ತ ಗಮನ ಕೊಟ್ಟು ಶಾಶ್ವತ ಪರಿಹಾರಈ ರಸ್ತೆಗೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.