
ಮೂಡಾಯಿಬೆಟ್ಟು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಅಮೃತ ಬಿಂದು ಸೇವಾ ಯೋಜನೆಯಡಿಯಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ ನೇತೃತ್ವದಲ್ಲಿ ವನಮಹೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ರಶ್ಮಿ ಹೆಚ್.ಎಸ್., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪದ್ಮನಾಭ ಗೌಡ, ಶಾಲಾ ಶಿಕ್ಷಕ ಕಿಶೋರ್ ಕುಮಾರ್, ಲಯನ್ಸ್ ಕ್ಲಬ್ ಬೆಳ್ತಂಗಡಿ ಜತೆ ಕಾರ್ಯದರ್ಶಿ ನಾಣ್ಯಪ್ಪ ನಾಯ್ಕ್, ಕಾರ್ಯಕ್ರಮ ಸಂಯೋಜಕ ವಸಂತ್ ಶೆಟ್ಟಿ ಶ್ರದ್ದಾ, ಲಯನ್ಸ್ ಸದಸ್ಯರಾದ ರಾಮಕೃಷ್ಣ ಗೌಡ, ಭುಜಬಲಿ ಧರ್ಮಸ್ಥಳ, ಗೋಪಾಲಕೃಷ್ಣ ಕಾಂಚೋಡು, ಸುಂದರಿ ನಾಣ್ಯಪ್ಪ ನಾಯ್ಕ್ ಉಪಸ್ಥಿತರಿದ್ದರು. ಮಂದಾರ ಬಲಿಪ ಸಹಕರಿಸಿದರು. ಲಯನ್ಸ್ ಕ್ಲಬ್ ಬೆಳ್ತಂಗಡಿ ಪರಿಸರ ಸಂಯೋಜಕ ಪ್ರವೀಣ್ ಹೆಚ್. ಎಸ್. ಕಾರ್ಯಕ್ರಮ ನಿರ್ವಹಿಸಿದರು.