


ಉಜಿರೆ: ಪ್ರತಿಷ್ಠಿತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ( ಸ್ವಾಯತ್ತ ) ದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಿದ್ಯಾರ್ಥಿ ನಾಯಕರುಗಳ ಆಯ್ಕೆ ಜು.24ರಂದು ನಡೆಯಿತು.
ಕಾಲೇಜಿನಲ್ಲಿ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 200 ಸ್ವಯಂಸೇವಕರುಗಳು ಎನ್.ಎಸ್.ಎಸ್ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಘಟಕ ಒಂದರ ವಿದ್ಯಾರ್ಥಿ ನಾಯಕರುಗಳಾಗಿ ದ್ವಿತೀಯ ಬಿ.ಎ. ಯ ನೆವಿಲ್ ನವೀನ್ ಮೋರಸ್ ಮತ್ತು ದ್ವಿತೀಯ ಬಿಕಾಂ ಮಾನ್ಯ ಕೆ.ಆರ್. ಆಯ್ಕೆಯಾಗಿದ್ದಾರೆ. ಘಟಕ ಎರಡರ ನಾಯಕರುಗಳಾಗಿ ದ್ವಿತೀಯ ಬಿಕಾಂ ಟಿ. ಸುದರ್ಶನ್ ನಾಯಕ್ ಮತ್ತು ದ್ವಿತೀಯ ಬಿಸಿಎ ರಕ್ಷ ಆರ್. ದೇವಾಡಿಗ ಆಯ್ಕೆಗೊಂಡಿದ್ದಾರೆ.


ಕಳೆದ 53 ವರ್ಷಗಳಿಂದ ರಾಷ್ಟ್ರೀಯ ಸೇವಾ ಯೋಜನೆಯ ಘಟಕವು ವಿಭಿನ್ನ ಕಾರ್ಯ ಮತ್ತು ಸೇವಾ ಚಟುವಟಿಕೆಗಳಿಂದ ತಾಲೂಕು ಮತ್ತು ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಮನ್ನಣೆಯೊಂದಿಗೆ ಪುರಸ್ಕೃತಗೊಂಡಿದೆ.
ವಿದ್ಯಾರ್ಥಿ ನಾಯಕರುಗಳಿಗೆ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮತ್ತು ದೀಪಾ ಆರ್.ಪಿ. 2025 – 26ನೇ ಶೈಕ್ಷಣಿಕ ವರ್ಷದ ನಾಯಕರುಗಳಿಗೆ ಮತ್ತು ಸ್ವಯಂಸೇವಕರಿಗೆ ಶುಭ ಹಾರೈಸಿದ್ದಾರೆ.









