
ಬೆಳ್ತಂಗಡಿ: ಸಮುದಾಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಜ್ಞರಾಗಿ ಫಿಜಿಶಿಯನ್ ಅಗಿ 11 ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಾ. ಚಂದ್ರಕಾಂತ್ ಕಾರ್ಕಳಕ್ಕೆ ವರ್ಗಾವಣೆಗೊಂಡಿದ್ದು ಇವರಿಗೆ ಆಸ್ಪತ್ರೆಯಿಂದ ಬೀಳ್ಕೊಡುಗೆ ಮಾಡಲಾಯಿತು.
ಆಡಳಿತ ವೈದ್ಯಾದಿಕಾರಿ ಡಾ.ರಮೇಶ್, ವೈದ್ಯಾದಿಕಾರಿಗಳಾದ ಡಾ.ರಮೇಶ್, ಡಾ. ಹೇಮಲತಾ, ಡಾ. ರಶ್ಮಿ, ಡಾ. ಆಶಾಲತಾ, ಡಾ. ತಾರಾಕೇಶ್ವರಿ, ಡಾ. ಶಶಾಂಕ್, ಡಾ. ಶಶಿಕಾಂತ್ ಡೋಂಗ್ರೆ, ಡಾ. ರೇಷ್ಮಾ, ಶುಶ್ರೂಷಕಿ ಅದೀಕ್ಷಕಿ ಪೊನ್ನಮ್ಮ ಉಪಸ್ಥಿತರಿದ್ದರು. ಪಾರ್ಮಸಿ ಅಧಿಕಾರಿ ಚಂದ್ರಕಾಂತ್ ಕಾರ್ಯಕ್ರಮ ನಿರೂಪಿಸಿದರು. ಡಾ ತಾರಾಕೇಶ್ವರಿ, ಡಾ ಶಶಿಕಾಂತ್, ಸಿಬ್ಬಂದಿಗಳಾದ ಗೀತಾ, ಸುಭಾಶಿನಿ ಅನಿಸಿಕೆ ವ್ಯಕ್ತಪಡಿಸಿದರು.