
ಬೆಳ್ತಂಗಡಿ ಹೊಸ ನ್ಯಾಯಾಲಯ ಸಂಕೀರ್ಣ ಕಟ್ಟಡಕ್ಕೆ ಕರ್ನಾಟಕ ಘನ ಸರ್ಕಾರ ಮಂಜೂರುಗೊಳಿಸಿದ ರೂ. 9ಕೋಟಿ ವೆಚ್ಚದ ಕಾಮಗಾರಿಯ ವಿಚಾರದಲ್ಲಿ ಜು.24ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜಾ, ಮಾಜಿ ಸಚಿವ ಅಭಯಚಂದ್ರ ಜೈನ್, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್, ಹಿರಿಯ ಸಮಿತಿ ಚೇರ್ಮನ್ ಅಲೋಶಿಯಸ್ ಎಸ್. ಲೋಬೋ, ಮಾಜಿ ಅಧ್ಯಕ್ಷರುಗಳಾದ ಶಿವಕುಮಾರ್ ಎಸ್.ಎಂ., ಶಶಿಕಿರಣ್ ಜೈನ್, ಪ್ರದಾನ ಕಾರ್ಯದರ್ಶಿ ನವೀನ್ ಬಿ.ಕೆ., ಕೋಶಾಧಿಕಾರಿ ಪ್ರಶಾಂತ್ ಎಂ., ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.