
ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘದ ನೇತೃತ್ವದಲ್ಲಿ ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ತಾಲೂಕು ಸಮಿತಿಯ ಸಹಭಾಗಿತ್ವದಲ್ಲಿ ಬಿ.ಎಮ್.ಎಸ್.ನ 70ನೇ ವರ್ಷದ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ದೆಹಲಿಯಲ್ಲಿ ಜು.23ರಂದು ನಡೆಯಿತು.

ರಾಷ್ಟೀಯ ಸ್ವಯಂಸೇವಕ ಸಂಘದ ಸರ ಸಂಘ ಚಾಲಕ ಡಾ. ಮೋಹನ್ ಜೀ ಭಾಗವತ್ ಅವರು ಸಮಾರೋಪ ಭಾಷಣವನ್ನುವನ್ನು ಬೆಳ್ತಂಗಡಿ ತಾಲೂಕಿನ ಅನೇಕ ಗಣ್ಯರ ಸಮ್ಮುಖದಲ್ಲಿ ನೇರಪ್ರಸಾರದ ಕಾರ್ಯಕ್ರಮ ಶ್ರೀ ಮಂಜುನಾಥೇಶ್ವರ ಪಿನಾಕೆ ಸಭಾಭಾವನ ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ವೀಕ್ಷಿಸಿದರು.

ನೇರ ಪ್ರಸಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ.ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಿಗಾಗಿ ಪುತ್ತೂರು ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರಕಾಶ್, ಬಿ.ಎಮ್.ಎಸ್. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು., ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್ ಉಜಿರೆ, ಆಟೋ ರಿಕ್ಷಾ ಯೂನಿಯನ್ ಇದರ ತಾಲೂಕು ಸಮಿತಿಯ ಅಧ್ಯಕ್ಷ ಕೃಷ್ಣ ಬೆಳಾಲು, ರಬ್ಬರ್ ಟ್ಯಾಪರ್ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರಾಜ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಮಂಡಳ ಅಧ್ಯಕ್ಷ ಶ್ರೀನಿವಾಸ್ ಧರ್ಮಸ್ಥಳ, ಪಟ್ಟಣ ಪಂ., ಅಧ್ಯಕ್ಷ ಜಯನಂದ ಗೌಡ, ದಿನೇಶ್ ಚಾರ್ಮಾಡಿ, ವಿಷ್ಣು ಮರಾಠೆ, ಗಣೇಶ್ ಗೌಡ ನಾವೂರು, ವಿಜಯ್ ಗೌಡ ವೇಣೂರು, ಸುಧೀರ್ ಸುವರ್ಣ, ಮಮತ ಶೆಟ್ಟಿ, ನವೀನ್ ನೆರಿಯ, ಸಂತೋಷ್ ಅತ್ತಜೆ ಹಾಗೂ ಬೆಳ್ತಂಗಡಿ ತಾಲೂಕಿನ ಬಿ.ಎಮ್.ಎಸ್. ಸಂಘಟನೆಯ ಕಾರ್ಯಕರ್ತರು, ಕಾರ್ಮಿಕ ಬಂಧುಗಳು, ರಾಷ್ಟ್ರ ಚಿಂತನೆಯ ಸಂಘ ಪರಿವಾರ ಸಂಘಟನೆಯ ಎಲ್ಲಾ ಹಿರಿಯರು, ಪ್ರಮುಖರು ಭಾಗವಹಿಸಿದ್ದರು.