
ಕೊಕ್ಕಡ: ಸೌತಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬೆಸ್ಟ್ ಫೌಂಡೇಶನ್ ಮತ್ತು ಸೌತಡ್ಕ ಸೇವಾ ಸಮಿತಿಯಿಂದ ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕವನ್ನು ಬೆಸ್ಟ್ ಫೌಂಡೇಶನ್ ನ ಅಧ್ಯಕ್ಷ ರಕ್ಷಿತ್ ಶಿವರಾಂ ವಿತರಣೆ ಮಾಡಿದರು.

ಸೌತಡ್ಕ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸದಸ್ಯರಾದ ಪ್ರಶಾಂತ್ ಮಚ್ಚಿನ, ಗಣೇಶ್ ಕಾಶಿ, ಹರಿಶ್ಚಂದ್ರ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕೊಕ್ಕಡ ಹಾಗೂ ಪ್ರಮುಖರಾದ ಅರುಣ್ ಲೋಬೊ, ನವೀನ ಗೌಡ, ಆಸಿಫ್ ಐಡಿಯಲ್, ನಿತಿನ್ ಕಡಿರ, ಬಿ.ಎಂ. ಜಗದೀಶ್, ಗಣೇಶ್ ಪಿ.ಕೆ. ಉಪಸ್ಥಿತರಿದ್ದರು.