ಬೆಳ್ತಂಗಡಿ: ರಕ್ಷಿತ್ ಶಿವರಾಮ್ ಗೆ ಕಳಿಯ, ಕೊಯ್ಯೂರು ಗ್ರಾಮಸ್ಥರಿಂದ ಸರಕಾರಿ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ

0

ಬೆಳ್ತಂಗಡಿ: ಬೆಳ್ತಂಗಡಿ ಕೆ.ಇ.ಬಿ. ರೋಡ್, ಹುಣ್ಸೆಕಟ್ಟೆ, ಮಲ್ಲೊಟ್ಟು, ಗೇರುಕಟ್ಟೆ, ಪರಪ್ಪು, ಎರುಕಡಪು ಆದೂರುಪೆರಾಲ್, ಕೊಯ್ಯೂರು ಗೆ ಶಾಲಾ ಮಕ್ಕಳಿಗೆ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯವಾದ ಸರಕಾರಿ ಬಸ್ಸಿನ ವ್ಯವಸ್ಥೆ ಕಲ್ಪಿಸಲು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಗೆ ಕಳಿಯ ಹಾಗೂ ಕೊಯ್ಯೂರು ಗ್ರಾಮಸ್ಥರ ನಿಯೋಗದಿಂದ ಮನವಿ.

ನಿಯೋಗದಲ್ಲಿ ಕೊಯ್ಯೂರು ಗ್ರಾಮ ಪಂಚಾಯತ್ ಸದಸ್ಯ ಲೊಕೇಶ್ ಪಾಂಬೇಲು, ಕೊಯ್ಯೂರು ಸಿಎ ಬ್ಯಾಂಕ್ ನಿರ್ದೇಶಕ ಯತೀಶ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ಗೌಡ ಕೊಯ್ಯೂರು, ಸ್ಥಳೀಯರಾದ ಇಸುಬು ಉನ್ನಾಲು, ಸಲೀಂ ಪಾತ್ರಾಳ, ಯೂಸುಫ್ ಕೊಯ್ಯೂರು, ಹಮೀದ್ ಜಿ.ಡಿ. ಗೇರುಕಟ್ಟೆ, ಅಬ್ದುಲ್ ರಝಾಕ್, ಅಬೂಬಕ್ಕರ್ ಖಮರ್ ಗೇರುಕಟ್ಟೆ ಮನವಿಯನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here