ಬೆಳ್ತಂಗಡಿ: ಕೊಕ್ಕಡ ಗ್ರಾಮದಲ್ಲಿ ದುಬಾರೆಯ ವಿಶೇಷ ತಂಡವು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಆದರೆ, ಪೆರಿಯಶಾಂತಿ ಬಳಿ ಕಾಡಾನೆಗಳು ಮತ್ತೆ ಮತ್ತೆ ಬೀದಿಬದಿ ಅಂಗಡಿಗಳತ್ತ ಬರುತ್ತಿರುವುದರಿಂದ ಆತಂಕ ಮನೆ ಮಾಡಿದೆ. ಬೀದಿ ಬದಿ ಅಂಗಡಿಗಳಲ್ಲಿ ಹಲಸಿನ ಹಣ್ಣು ಮಾರಾಟ ಮಾಡುತ್ತಿದ್ದು, ಅಲ್ಲದೆ ಹಣ್ಣಿನ ತ್ಯಾಜ್ಯ ಅಲ್ಲಲ್ಲೇ ಎಸೆದಿದ್ದು ಅದರ ವಾಸನೆಗೆ ಆನೆಗಳು ಪೆರಿಯಶಾಂತಿಯತ್ತ ನುಗ್ಗುತ್ತಿವೆ. ಅಲ್ಲದೆ ಆನೆಗಳು ಈಗಾಗಲೇ ಅಲ್ಲಿಗೆ ಆಗಮಿಸಿದ್ದು, ಅಲ್ಲಿ ಲದ್ದಿ ಕಂಡುಬಂದಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಆನೆಗಳ ಕಾರ್ಯಾಚರಣೆಗೆ ಯಾವುದೇ ತೊಡಕು ಬಾರದಂತೆ ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಅಂಗಡಿಗಳ ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ.