ಉಜಿರೆ: ರತ್ನ ಮಾನಸ ಜೀವನ-ಶಿಕ್ಷಣ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಂದ ಜು.20ರಂದು ನೇಜಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರತ್ನಮಾನಸದ ನಿಲಯ ಪಾಲಕ ಯತೀಶ್ ಕೆ. ಬಳಂಜ ನೇಜಿ ನೆಡುವ ವಿಧಾನ ಹಾಗೂ ರತ್ನ ಮಾನಸದ ಹಿರಿಯ ವಿದ್ಯಾರ್ಥಿ ಉದ್ಯಮಿ ಜಗದೀಶ ಪ್ರಸಾದ್ ಭತ್ತದ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ನಿಲಯದ ವಿದ್ಯಾರ್ಥಿಗಳೊಂದಿಗೆ ಉಜಿರೆಯ ಎಸ್.ಡಿ.ಎಂ. ಕಾಲೇಜು(ಸ್ವಾಯತ್ತ) ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಜೊತೆಗೂಡಿ ನೇಜಿ ನಾಟಿ ಮಾಡಿ, ನಂತರ ಕೆಸರು ಗದ್ದೆಯಲ್ಲಿ ಆಟವಾಡಿ ಸಂಭ್ರಮಿಸಿದರು.

ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಶಕುಂತಲಾ ಬಿ., ಸಹಾಯಕ ಪ್ರಾಧ್ಯಾಪಕ ಭವ್ಯ ನಾಯಕ್, ಮಂಜುಶ್ರೀ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ಶಿವಪ್ರಸಾದ್ ಮಲೆಬೆಟ್ಟು , ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಭಾಕರ ಹೆಗ್ಡೆ, ನಿಲಯದ ಶಿಕ್ಷಕ ರವಿಚಂದ್ರ, ಉದಯರಾಜ್, ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.