ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಹಾಗೂ ಪ್ರಗತಿಬಂದು ಸ್ವ-ಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಆಟಿಡೊಂಜಿ ಕೆಸರ್ ದ ಗೊಬ್ಬು- 2025 ಕಾರ್ಯಕ್ರಮವು ವಿಧಾನ ಪರಿಷತ್ ಶಾಸಕ ಕೆ.ಪ್ರತಾಪಸಿಂಹ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಗುರುವಾಯನಕೆರೆ ಪಿಲಿಚಾಮುಂಡಿಕಲ್ಲು ಗದ್ದೆಮನೆ ಎಂಬಲ್ಲಿ ಜು.20ರಂದು ನಡೆಯಿತು.


ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಗ್ರಾಮೀಣ ಪ್ರದೇಶದ ಸಂಸ್ಕೃತಿ, ಸಂಸ್ಕಾರ ಮೌಲ್ಯವನ್ನು ಉಳಿಸುವ ಒಂದು ಮಹತ್ವದ ಕಾರ್ಯ ಈ ಗದ್ದೆಯಲ್ಲಿ ನಡೆಯುತ್ತಿದೆ ಎಂದರು.

ಧರ್ಮಸ್ಥಳ ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್. ಮಾತನಾಡಿ ಧರ್ಮ, ಸತ್ಯ ಉಳಿದಿದೆ. ಮುಂದೆ ಉಳಿಯುತ್ತೆ ಎಂಬುದಕ್ಕೆ ನಿಮ್ಮಂತ ಒಳ್ಳೆಯ ಯುವಜನತೆ ಸಾಕ್ಷಿ, ಕಾಲೇಜು ವಿದ್ಯಾರ್ಥಿಗಳನ್ನು ನೋಡಿದಾಗ ಭಾರತದ ಮುಂದಿನ ದಿನಗಳು ಇನ್ನೂ ಉಜ್ವಲವಾಗಲಿದೆ. ಎಂಬುದಕ್ಕೆ ನಾವು ನಿಮ್ಮಿಂದ ಈ ಭೂಮಿಯನ್ನು ನೋಡಬಹುದು ಎಂದರು.


ವೇದಿಕೆಯಲ್ಲಿ ಎಕ್ಸೆಲ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಡಾ|ಪ್ರಜ್ವಲ್, ಧಾರ್ಮಿಕ ಮುಖಂಡ ಡಿ. ಕಿರಣ್ ಚಂದ್ರ ಪುಷ್ಪಗಿರಿ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಸುವರ್ಣ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ರೈತಬಂಧು ಕಣಿಯೂರು ಸಂಸ್ಥೆಯ ಶಿವಶಂಕರ್ ನಾಯಕ್, ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟ ಇದರ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಜೈನ್ ಕಡಂಬು, ಲಯನ್ಸ್ ಕ್ಲಬ್ ಬೆಳ್ತಂಗಡಿ ನಿಕಟಪೂರ್ವ ಅಧ್ಯಕ್ಷ ದೇವದಾಸ್ ಶೆಟ್ಟಿ, ಮುಂಡೂರು ನಾಗಕಲ್ಲುರ್ಟಿ ದೈವಸ್ಥಾನದ ಆಡಳಿತ ಮೊಕ್ತೇಸರ ರಾಜೀವ, ಗದ್ದೆಮನೆ ಪ್ರಗತಿಪರ ಕೃಷಿಕ ವಿಶ್ವನಾಥ್ ರಾವ್, ಪಿಲಿಗೂಡು ಚಾಮುಂಡೇಶ್ವರಿ ಕೃಪಾ ಪದ್ಮನಾಭ ಶಿಲ್ಪಿ, ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಗೌರವಾಧ್ಯಕ್ಷ ಫ್ರಶಾಂತ್ ಫಾರೆಂಕಿ, ಸಂತೋಷ್ ಸನಿಲ್, ನಾರಾಯಣ ಶೆಟ್ಟಿ, ಶಾಂತಿರಾಜ್ ಜೈನ್, ಎಸ್.ಕೆ.ಡಿ.ಆರ್.ಡಿ.ಪಿ. ಉಡುಪಿ ಇದರ ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ ಉಪಸ್ಥಿತರಿದ್ದರು.

ಯೋಜನಾಧಿಕಾರಿ ಆಶೋಕ್ ಸ್ವಾಗತಿಸಿದರು. ವಿನ್ಯಾಸ್ ನಿರೂಪಿಸಿದರು. ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ್ ಧರ್ಮಸ್ಥಳ ವಂದಿಸಿದರು.