ವೇಣೂರು: ಪ್ರಸಾದ್ ಕ್ಲಿನಿಕ್ ನ ಡಾ. ರವೀಂದ್ರನಾಥ್ ಪ್ರಸಾದ್ ರಿಗೆ ವೇಣೂರು ಲಯನ್ಸ್ ಕ್ಲಬ್ ವತಿಯಿಂದ ನುಡಿ ನಮನ ಕಾರ್ಯಕ್ರಮ ಲಯನ್ಸ್ ಸಭಾಭವನದಲ್ಲಿ ನಡೆಯಿತು.
ಲಯನ್ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಲಯನ್ ಪ್ರವೀಣ್ ಕುಮಾರ್ ಇಂದ್ರ ನುಡಿ ನಮನವನ್ನು ಸಲ್ಲಿಸಿ, ಡಾ. ಪ್ರಸಾದ್ ರವರು ನಮ್ಮ ಕ್ಲಬ್ ನ 38 ವರ್ಷದ ಹಿರಿಯ ಸದಸ್ಯರಾಗಿದ್ದು ಪ್ರಾಮಾಣಿಕ ಹಾಗೂ ಅತ್ಯುತ್ತಮ ವೈದ್ಯರಾಗಿದ್ದು, ಬಡವರ ಪಾಲಿನ ಕಡಿಮೆ ಖರ್ಚಿನ ವೈದ್ಯರಾಗಿದ್ದರು ಎಂದರು. ಕಬ್ ನ ಎಲ್ಲಾ ಸದಸ್ಯರು ಪದಾಧಿಕಾರಿಗಳು ಇವರಿಗೆ ನುಡಿ ನಮನ ಸಲ್ಲಿಸಿದರು.