ಬೆಳ್ತಂಗಡಿ: ಕೊಕ್ಕಡ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಬಾಲಕೃಷ್ಣ ಹೊಸಮಜಲು(70ವ) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಜು.19ರಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಸೇವಾ ಮನೋಭಾವನೆ, ಕರ್ತವ್ಯನಿಷ್ಠೆ ಹಾಗೂ ಸರಳ ಜೀವನಶೈಲಿಗೆ ಹೆಸರಾಗಿದ್ದರು. ನಿವೃತ್ತಿಯ ಬಳಿಕ ಹೊಸಮಜಲಿನಲ್ಲಿ ಕುಟುಂಬದೊಂದಿಗೆ ಶಾಂತ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.