ಬೆಳ್ತಂಗಡಿ: ಜು. 14ರಂದು ಪ್ರಾಂಶುಪಾಲ ಭಗಿನಿ ಜ್ಯೋತಿ ಮೋಲಿ ಡಿಕುನ್ಹ ಅವರ ಮುಂದಾಳುತನದಲ್ಲಿ ಶಿಕ್ಷಕರಕ್ಷಕ ಮಹಾಸಭೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಭೆಯಲ್ಲಿ ಸಂತ ತೆರೇಸಾ ಸಂಯುಕ್ತ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು. ಶಿಕ್ಷಕರಕ್ಷಕ ಸಭೆಯ ಮುಖ್ಯ ಅತಿಥಿಯಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಅರ್ಸುಲೈನ್ ಫ್ರಾನ್ಸಿಸ್ಕಾನ್ ಸಂಸ್ಥೆಯ ಸಹಕಾರ್ಯದರ್ಶಿ ಭಗಿನಿ ಜುಲಿಯಾನ ಪಾಯ್ಸ್ ಆಗಮಿಸಿದ್ದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿ, ಪ್ರಾರ್ಥನಾ ನೃತ್ಯ ಹಾಗೂ ಕಿರು ನಟನೆಯ ಮುಖಾಂತರ ಬಂದಿರುವ ಅತಿಥಿ ಗಣ್ಯರನ್ನು ಹಾಗೂ ಪೋಷಕರನ್ನು ಸ್ವಾಗತಿಸಲಾಯಿತು.
ವೇದಿಕೆಯಲ್ಲಿ ಅತಿಥಿಗಳಾಗಿ ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಚಾಲಕಿ ಭಗಿನಿ ತೆರೇಸಿಯಾ ಸೆರಾ, ಸಂತ ತೆರೇಸಾ ಕಾನ್ವೆಂಟಿನ ಸುಪೀರಿಯರ್ ಭಗಿನಿ ಜೆಸಿಂತಾ ಭರೆಟೋ, ಸಂತ ತೆರೇಸಾ ಪ್ರೌಢಶಾಲೆಯ ಪ್ರಾಂಶುಪಾಲೆ ಭಗಿನಿ ಲೀನಾ ಡಿಸೋಜಾ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಭಗಿನಿ ಜ್ಯೋತಿ ಮೋಲಿ ಡಿಕುನ್ಹಾ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲೆ ಭಗಿನಿ ಪ್ರೀಮಾ ಅವರು ಬಂದಿರುವ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳ ಮಾರ್ಗದರ್ಶನದಲ್ಲಿ 2025-26ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಯಿತು. ಹಾಗೂ ಮುಖ್ಯ ಅತಿಥಿಗಳು ಮಕ್ಕಳಲ್ಲಿ ಪೋಷಕರ ಪಾತ್ರದ ಮಹತ್ವವನ್ನು ತಿಳಿಸಿದರು. ಪ್ರಾಂಶುಪಾಲರು ವಿದ್ಯಾ ಸಂಸ್ಥೆಯ ನಿಯಮಾವಳಿಗಳನ್ನು ಹೆತ್ತವರಿಗೆ ಮನದಟ್ಟು ಮಾಡಿದರು.
2025-26ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಲಾಯಿತು.ಉಪನ್ಯಾಸಕಿ ಝೀಟ ಕಾರ್ಯಕ್ರಮವನ್ನು ನಿರೂಪಿಸಿ, ಉಪನ್ಯಾಸಕ ಲೋಕೇಶ್ ವಂದನಾರ್ಪಣೆಗೈದರು.