ಮಡಂತ್ಯಾರು: ಮಾರಿಗುಡಿಯಿಂದ ಬ್ರಹ್ಮಗಿರಿಯವರೆಗೆ ರಸ್ತೆಗೆ ವಾಲಿಕೊಂಡಿರುವ ಮರಗಳು ಅಪಾಯಕಾರಿಯಲ್ಲಿದೆ. ಇದು ಮಡಂತ್ಯಾರು ಉಪ್ಪಿನಂಗಡಿ ಸಂಚಾರದ ರಸ್ತೆ ಇದಾಗಿದ್ದು ಹಲವಾರು ವಾಹನಗಳು ಓಡಾಡುವ ಈ ರಸ್ತೆಯಲ್ಲಿ ಗಾಳಿ ಮಳೆ ಬಂದಾಗ ಸಂಚಾರಕ್ಕೆ ಭಯ ಉಂಟುಮಾಡುವಂತಿದೆ.
ಅದಲ್ಲದೆ ವಿದ್ಯುತ್ ಕಂಬದ ಮೇಲ್ಗಡೆ ಮರಗಳು ಹಾದುಹೋಗಿದ್ದು ಮರಗಳು ಗಾಳಿ ಮಳೆಗೆ ಬಿದ್ದರೆ ಎಷ್ಟು ಕಷ್ಟ ನಷ್ಟಗಳಾಗುವ ಸಂಭವ ಇದೆ ಎನ್ನುತ್ತಾರೆ. ಗ್ರಾಮಸ್ಥರು ಇನ್ನಾದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಗ್ರಾಮ ಪಂಚಾಯತ್ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜನರ ಒತ್ತಾಯ.
ವರದಿ: ✍️ಹರ್ಷ ಬಳ್ಳಮಂಜ