ವಿಜಯರತ್ನ ಪುರಸ್ಕೃತ ಸುಮಂತ್ ಕುಮಾರ್ ಜೈನ್ ಗೆ ಅರಮಲೆ ಬೆಟ್ಟದಲ್ಲಿ ಅಭಿನಂದನೆ

0

ಗುರುವಾಯನಕೆರೆ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನಿಯರಿಗೆ ವಿಜಯರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದು, ಇದರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್
ಜೈನ್ ಗೆ ಈ ಭಾರಿಯ ವಿಜಯರತ್ನ ಪ್ರಶಸ್ತಿ 2025 ನೀಡಲಾಗಿತ್ತು. ಈ ಪ್ರಶಸ್ತಿ ಗೆ ಭಾಜನರಾದ ಇವರನ್ನು ಜು.14ರಂದು ಗುರುವಾಯನಕೆರೆ ಶ್ರಿ ಕ್ಷೇತ್ರ ಅರಮಲೆಬೆಟ್ಟದ ವತಿಯಿಂದ ಅಭಿನಂದಿಸಲಾಯಿತು. ಶ್ರಿ ಕ್ಷೇತ್ರ ಅರಮಲೆಬೆಟ್ಟ ಅನುವಂಶಿಕ ಆಡಳಿತ ಮೋಕ್ತೇಸರ ಸುಖೇಶ್ ಕುಮಾರ್ ಕಡಂಬು, ಅರಮನೆ ಅರ್ಥ್ ಮೂವರ್ಸ್ ಮಾಲೀಕ ಸುನೀಶ್ ಕುಮಾರ್ ಕಡಂಬು, ಓಮ್ ಎಲೆವೆಟರ್ಸ್ ಮಾಲೀಕರಾದ ಪ್ರದೀಪ್ ಕುಮಾರ್ ಶೆಟ್ಟಿ, ಆನಂದ ಶೆಟ್ಟಿ ವಾತ್ಸಲ್ಯ, ಶರಣ್ ಮಂಗಳೂರು, ವಾಮನ ಆಚಾರ್ಯ, ನಾರಾಯಣ ಆಚಾರ್ಯ ಬರಾಯ, ಎಕ್ಸೆಲ್ ಸಿಬ್ಬಂದಿವರ್ಗ, ಸಂತೋಷ್ ಕುಮಾರ್ ಗುರುವಾಯನಕೆರೆ, ನಿತೇಶ್ ಆಚಾರ್ಯ ಪಾಡ್ಯಾರ್ ಮಜಲು ಮತ್ತು ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here