ಕಳೆಂಜ: ಜು.14ರಂದು ನಾಪತ್ತೆಯಾಗಿದ್ದ ಕಳೆಂಜ ಗ್ರಾಮದ ರೆಂಜದಡಿ ಮನೆ ನಿವಾಸಿ ಜಿನ್ನಪ್ಪ ಗೌಡ(76) ಅವರ ಶವ ಜು.15ರಂದು ಪತ್ತೆಯಾಗಿದೆ.
ಜು. 14ರಂದು ಕಾಣೆಯಾಗಿದ್ದ ಜಿನ್ನಪ್ಪ ಗೌಡ ಅವರ ಪತ್ತೆಗಾಗಿ ಅವರ ಮನೆಯವರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು. ಆದರೂ ಪತ್ತೆ ಆಗಿರಲಿಲ್ಲ. ಇಂದು ಮುಂಜಾನೆ ಮತ್ತೆ ಸ್ಥಳೀಯ ಸಿ ಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಾಯರ್ತಡ್ಕ ದಿಂದ ಅಮ್ಮಿನಡ್ಕ ಕಡೆಗೆ ಬಂದಿರುವುದು ತಿಳಿದು ಬಂದಿರುವುದರಿಂದ ಮನೆಯವರು ಮತ್ತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಮಧ್ಯಾಹ್ನ ನಂತರ ಅರಸಿನಮಕ್ಕಿ- ಶಿಶಿಲ ಶೌರ್ಯ ವಿಪತ್ತು ತಂಡದ ಸದಸ್ಯರೊಂದಿಗೆ ಕುದ್ದ ಸಮೀಪ ಇರುವ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಶವವಾಗಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಊಹೆ ಮಾಡಿಕೊಳ್ಳುತ್ತಿದ್ದೂ ನೈಜ ಕಾರಣ ಇನ್ನಷ್ಟೇ ತನಿಖೆಯ ಮೂಲಕ ತಿಳಿಯಬೇಕಿದೆ. ಮೃತರು ಪುತ್ರ ಶಿವರಾಂ, ಪುತ್ರಿಯರಾದ ವೇದಾವತಿ, ಕುಸುಮ ಅವರನ್ನು ಅಗಲಿದ್ದಾರೆ.