ನಿಟ್ಟಡೆ: ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ಸಂಸತ್ತಿಗೆ ಚುನಾವಣೆ ನಡೆದಿದ್ದು ಮುಖ್ಯಮಂತ್ರಿ ಸುಶಾಂತ್ ಹಾಗೂ ಉಪಮುಖ್ಯಮಂತ್ರಿಯಾಗಿ 7ನೇ ತರಗತಿಯ ಮೋನಿಷಾ ಆಯ್ಕೆಯಾಗಿದ್ದಾರೆ.
ಮೊಬೈಲ್ ತಂತ್ರಾಂಶದ ತಂತ್ರಜ್ಞಾನ ಬಳಸಿಕೊಂಡು ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯು ಎಲ್ಲರ ಗಮನ ಸೆಳೆಯಿತು ಆಯ್ಕೆಯಾದ ವಿದ್ಯಾರ್ಥಿ ನಾಯಕರುಗಳಿಗೆ ಅವರವರ ಕರ್ತವ್ಯಗಳನ್ನು ಮುಖ್ಯ ಶಿಕ್ಷಕಿ ನೆನಪಿಸಿದರು. ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ನಾಯಕರುಗಳು ಶಾಲೆಯ ಏಳಿಗೆಗಾಗಿ ಶ್ರಮಿಸಬೇಕೆಂದು ಹೇಳಿದರು.
ಶಾಲಾ ಸಂಸತ್ ಚುನಾವಣೆಯಲ್ಲಿ ಸ್ಪೀಕರಾಗಿ ಆಯಿಷಾ ಫಿದಾ ಗೃಹ ಮಂತ್ರಿಯಾಗಿ ಲಿಖಿತ್ 8ನೇ ತರಗತಿ, ಸಾಂಸ್ಕೃತಿಕ ಮಂತ್ರಿಯಾಗಿ ತೇಜಸ್ವಿನಿ 7ನೇ ತರಗತಿ, ವಿದ್ಯಾಮಂತ್ರಿಯಾಗಿ ಫಾತಿಮಾ ಮಿಸ್ನ 7ನೇ ತರಗತಿ, ಆರೋಗ್ಯಮಂತ್ರಿಯಾಗಿ ರತನ್ 8ನೇ ತರಗತಿ, ತೋಟಗಾರಿಕಾ ಮಂತ್ರಿಯಾಗಿ ಸುಶ್ಮಿತಾ 8ನೇ ತರಗತಿ, ಆಹಾರ ಮಂತ್ರಿಯಾಗಿ ಆದಿತ್ಯ 8ನೇ ತರಗತಿ, ಸ್ವಚ್ಛತಾ ಮಂತ್ರಿಯಾಗಿ ನಫಿಶತುಲ್ ಮಿಶ್ರಿಯ 8ನೇ ತರಗತಿ, ನೀರಾವರಿ ಮಂತ್ರಿಯಾಗಿ ಶ್ರವಣ್ 8ನೇ ತರಗತಿ, ವಾರ್ತಾ ಮಂತ್ರಿಯಾಗಿ ಫಾತಿಮಾ ಫೈಮಾ 8ನೇ ತರಗತಿ, ಕ್ರೀಡಾ ಮಂತ್ರಿಯಾಗಿ ಯಶವಂತ 8ನೇ ತರಗತಿ, ವಿರೋಧ ಪಕ್ಷದ ನಾಯಕಿಯಾಗಿ ಶಿಫಾನ 8ನೇ ತರಗತಿ ಆಯ್ಕೆಯಾಗಿದ್ದಾರೆ.
ಇವರೆಲ್ಲರಿಗೂ ಪ್ರಭಾರ ಮುಖ್ಯ ಶಿಕ್ಷಕಿ ಆರತಿ, ಜು. 2ರಂದು ಪ್ರಮಾಣವಚನ ಬೋಧಿಸಿದರು. ಶಾಲಾ ಸಂಸತ್ ಚುನಾವಣೆ ಕಾರ್ಯದಲ್ಲಿ ಶಿಕ್ಷಕಿಯರಾದ ಲೀನಾ ಡಿಸೋಜ ಮತ್ತು ಸ್ಮಿತಾ, ಅತಿಥಿ ಶಿಕ್ಷಕಿಯರಾದ ನವ್ಯ, ಪ್ರತಿಭಾ, ಸುಜಾತ, ಝರಿನಾ ಬಾನು ಸಹಕರಿಸಿದರು. ಟಿಜಿಟಿ ಶಿಕ್ಷಕಿ ಅನಿತಾ, ಸಹ ಶಿಕ್ಷಕರಾದ ಗಣೇಶ್, ಜಿಪಿಟಿ ಶಿಕ್ಷಕಿ ರಜನಿ ಇ.ವಿ.ಎಂ ಬಳಕೆಯೊಂದಿಗೆ ಚುನಾವಣೆ ಆಯೋಜಿಸಿದ್ದರು.