ಬೆಳ್ತಂಗಡಿ: ಕಪುಚಿನ್ ಕೃಷಿಕ್ ಸೇವಾ ಕೇಂದ್ರ ಮತ್ತು ಕುವೈಟ್ ಕೆನರಾ ವೆಲ್ಫೇರ್ ಅಸೋಸಿಯೇಶನ್ ನಿಂದ ಸುವಿದ್ಯಾ ಬಡ್ಡಿ ರಹಿತ ಶಿಕ್ಷಣ ಸಾಲ ವಿತರಣಾ ಕಾರ್ಯಕ್ರಮವು ಜು.13ರಂದು ವಿಮುಕ್ತಿ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೆ.ಸಿ.ಡಬ್ಲ್ಯೂ.ಎ ಇದರ ಅಧ್ಯಕ್ಷ ಪ್ರಕಾಶ್ ಗೊಡ್ವಿನ್ ಪಿಂಟೊ, ಹಾಲಿ ಅಧ್ಯಕ್ಷ ನವೀನ್ ಮಸ್ಕರೇನಸ್, ಕಾರ್ಯದರ್ಶಿ ರೀನಾ ರೇಗೊ ಮತ್ತು ಸದಸ್ಯರಾದ ಪ್ರಶಾಂತ್ ಫೆರಾವೊ, ಹೋಲಿ ಟ್ರಿನಿಟಿ, ಕರ್ನಾಟಕ ಇದರ ಉಪ ಪ್ರಾಂತ್ಯಾಧಿಕಾರಿ ಫಾ. ಪೌಲ್ ಮೆಲ್ವಿನ್ ಡಿಸೋಜಾ, ದಯಾಳ್ಬಾಗ್ ಆಶ್ರಮದ ನಿರ್ದೇಶಕ ಫಾ. ದೀಪಕ್ ಫೆರ್ನಾಂಡಿಸ್, ಸಿ.ಕೆ.ಎಸ್.ಕೆ. ಸಂಸ್ಥೆಯ ನಿರ್ದೇಶಕ ಫಾ. ವಿನೋದ್ ಮಸ್ಕರೇನಸ್ ಅವರು ಉಪಸ್ಥಿತರಿದ್ದರು. ಒಟ್ಟು 33 ವಿದ್ಯಾರ್ಥಿಗಳಿಗೆ ಸರಿಸುಮಾರು 16 ಲಕ್ಷ ಮೊತ್ತವನ್ನು ವಿತರಿಸಲಾಯಿತು.
ಪ್ರದೀಪ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಲವೀನಾ ಅವರು ವಂದನಾರ್ಪಣೆ ಸಲ್ಲಿಸಿದರು.