ಬಂಗಾಡಿ: ಬಿ.ಎಸ್.ಎನ್.ಎಲ್. ಟವರ್ ಇದ್ದರೂ ಎರಡು ವಾರದಿಂದ ನೇಟ್ ವರ್ಕ್ ಇಲ್ಲ. ಪ್ರತಿಬಾರಿಯು ಇಲ್ಲಿರುವ ಬಿ.ಎಸ್.ಎನ್.ಎಲ್. ನೆಟ್ವರ್ಕ್ ಕೈ ಕೊಡುತ್ತಿರುವುದರಿಂದ ಬಿ.ಎಸ್.ಎನ್.ಎಲ್. ಸಿಮ್ ಹೊಂದಿರುವ ಗ್ರಾಹಕರು, ಇಲ್ಲಿ ಖಾಸಗಿ ನೆಟ್ ವರ್ಕ್ ಸಮರ್ಪಕವಾಗಿ ಸಿಗದೆ ಇರುವುದರಿಂದ ಹಲವು ಅಗತ್ಯ ದಾಖಲೆಗಳಿಗೆ ಬಿ.ಎಸ್.ಎನ್.ಎಲ್. ನಂಬರನ್ನೇ ನೀಡರುವುದರಿಂದ ಇದನ್ನೆ ನಂಬಿರುವ ಗ್ರಾಹಕರು
ನೆಟ್ ವರ್ಕ್ ಇಲ್ಲದೆ ಬ್ಯಾಂಕ್ ಒ.ಟಿ.ಪಿ., ಆನ್ ಲೈನ್ ಪೇ, ಇತರ ಅಗತ್ಯ ಕರೆ ಮಾಡುವುದಕ್ಕೂ ಕಂಗಲಾಗಿದ್ದಾರೆ. ಹಲವು ಬಾರಿ ದೂರನ್ನು ನೀಡಿದರೂ ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕ ಉಪಯೋಗಕ್ಕಿಲ್ಲದ ಈ ಟವರನ್ನು ಬಂಗಾಡಿಯಿಂದ ತೆರವುಗೊಳಿಸಿ, ಖಾಸಗಿ ನೆಟ್ ವರ್ಕ್ ಕಂಪನಿಯವರಿಗೆ ಅವಕಾಶ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.