ವೇಣೂರು: ಐತಿಹಾಸಿಕ ಮಹತ್ತ್ವದ ವೇಣೂರಿನ ಶ್ರೀ ಗಣೇಶೋತ್ಸವಕ್ಕೆ ಈ ಬಾರಿ 25ವರ್ಷ ತುಂಬುವ ಸಂಭ್ರಮ. ಫಲ್ಗುಣಿ ಸೇವಾ ಸಂಘ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಸಿಕೊಂಡು ಬರುತ್ತಿರುವ ಗಣೇಶೋತ್ಸವವನ್ನು ಈ ಬಾರಿ ಇನ್ನಷ್ಟು ಅದ್ಧೂರಿಯಾಗಿ ನೆರವೇರಿಸಲು ತೀರ್ಮಾನಿಸಲಾಗಿದೆ. ಶ್ರೀ ಗಣೇಶೋತ್ಸವ ಬೆಳ್ಳಿ ಹಬ್ಬದ ಲಾಂಛನವನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಅನಾವರಣಗೊಳಿಸಿದರು.
ವೇಣೂರಿನ ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ ಕೆ.ಶಿವರಾಮ ಹೆಗ್ಡೆ, ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಶಾಂತಿ ಪ್ರಸಾದ್, ಭಾಸ್ಕರ ಪೈ, ಅಧ್ಯಕ್ಷ ಜಗದೀಶ್ ಡಿ.ಕೆ., ಫಲ್ಗುಣಿ ಸೇವಾ ಸಂಘದ ಅಧ್ಯಕ್ಷ ವಿ.ಎಸ್. ಜಯರಾಜ್, ಸದಸ್ಯರಾದ ಪ್ರಸನ್ನ ಹೆಬ್ಬಾರ್, ಶ್ರೀಕಾಂತ ಉಡುಪ ಹೇಮಂತ್ ಕುಮಾರ್, ಅರುಣ್ ಕುಮಾರ್ ಐಂದಲ್ಕೆ, ಸುದತ್ ಜೈನ್, ಪ್ರಮೋದ್ ಕುಮಾರ್ ಜೈನ್, ಗಂಗಾಧರ ಆಚಾರ್ಯ, ಪ್ರಶಾಂತ ನಾಯಕ್, ಸದಾಶಿವ ಭಂಡಾರಿ, ಪ್ರಕಾಶ್ ಚಂದ್ರ ಹೆಗ್ಡೆ, ನಿರಂಜನ್ ಕೆ.ಎಸ್., ಪ್ರಸಾದ ಜೈನ್, ಶ್ರೀ ಸದಾನಂದ ‘ ಬ್ರಹ್ಮ ಶ್ರೀ ‘, ಸೀತಾರಾಮ ಆಚಾರ್ಯ, ಗಿರೀಶ್ ಕೆ.ಎಸ್., ಎಕ್ಸೆಲ್ ವಿದ್ಯಾ ಸಂಸ್ಥೆಗಳ ಕ್ಯಾಂಪಸ್ ಮ್ಯಾನೇಜರ್ ಶಾಂತಿ ರಾಜ್ ಜೈನ್ ಹಾಗೂ ಎಕ್ಸೆಲ್ ಟೆಕ್ನೋ ಸ್ಕೂಲ್ ನ ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡರು.