
ಬೆಳಾಲು: ಕುಕ್ಕೊಟ್ಟು ನಿವಾಸಿ ನಾಗೇಶ್ ಎಂಬವರ ಮಗಳು ವೀಣಾ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜೂ.11 ರಂದು ನಡೆದಿದೆ.
ವೀಣಾರವರ ಪಾರ್ಥೀವ ಶರೀರ ಕೆರೆಯಲ್ಲಿ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ವೀಣಾ ಮೇ.10 – 2025ರಂದು ನಾಪತ್ತೆಯಾಗಿದ್ದಾರೆಂಬ ದೂರಿನ ಹಿನ್ನಲೆ ಪೊಲೀಸರು ಪ್ರಕಟಣೆ ಹೊರಡಿಸಿದ್ದರು. ಆ ನಂತರ ಆಕೆ ಪತ್ತೆಯಾಗಿದ್ದರು. ಜೂ.11ರಂದು ಆಕೆಯ ಶವ ಕೆರೆಯಲ್ಲಿ
ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.