ಶಿಶಿಲ: ದೇವಳದ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ಸಭೆ ಜು. 11ರಂದು ಆಡಳಿತಾಧಿಕಾರಿ ದಿನೇಶ್ ಎಂ. ಅವರ ಅಧ್ಯಕ್ಷತೆಯಲ್ಲಿ ದೇವಳದ ಆವರಣದಲ್ಲಿ ನಡೆಯಿತು. ಈ ಸಭೆಗೆ ದೇವಳದ ಪ್ರಧಾನ ಅರ್ಚಕ ಪಿ. ರಾಮ ಕಾರಂತ್ ಅರ್ಜಿ ಸಲ್ಲಿಸಿರುವ ಚೆನ್ನಪ್ಪ ಬಂಗ್ಲೆತಡ್ಕ, ವಿಮಲ ಎಳ್ಳುಮಜಲು, ಪ್ರೇಮ ದೇವಸ, ರಮೇಶ್ ಮುಚಿರಡ್ಕ, ಸುಂದರ ಗೌಡ ನಾಗನಡ್ಕ, ಕೆ. ಸುನಿಲ್ ಗೋಖಲೆ ಹಾಜರಾಗಿದ್ದರು.


ಅರ್ಜಿ ಸಲ್ಲಿಸಿದ್ದ 9 ಜನರಲ್ಲಿ 2 ಅರ್ಜಿಗಳು ಇತರೆ ಕಾರಣಗಳಿಂದ ತಿರಸ್ಕಾರಗೊಂಡಿದ್ದರಿಂದ 7 ಜನರ ಅರ್ಜಿ ಮಾತ್ರ ಸಿಂದು ಆಗಿದ್ದು, ಈ ಪೈಕಿ ಸುನಿಲ್ ಗೋಖಲೆ ಉಮ್ಮಂತಿಮಾರ್ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದು, ಉಳಿದವರು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷದ ವತಿಯಿಂದ ಪ್ರಭಾರಿಗಳಾಗಿ ಸೌತಡ್ಕ ಶ್ರೀ ಮಹಾಗಣಪತಿ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶಬರಾಯ, ಸದಸ್ಯರಾದ ಪ್ರಮೋದ್ ಶೆಟ್ಟಿ ರೆಖ್ಯ ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಸುಂದರ ಅವರು ಆಯ್ಕೆ ಪ್ರಕ್ರಿಯೆಗೆ ಸಹಕರಿಸಿದರು. ಊರಿನ ಪ್ರಮುಖರು ಮತ್ತು ಹಿರಿಯರು ಉಪಸ್ಥಿತರಿದ್ದರು.