ಉಜಿರೆ: ಕಾಲೇಜಿನ ಹೆಚ್.ಆರ್.ಡಿ. ಟ್ರೈನಿಂಗ್ ಸೆಲ್ ನಿಂದ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ತರಬೇತಿ ಹಮ್ಮಿಕೊಳ್ಳಲಾಯಿತು. ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ಲೈಫ್ ಸ್ಕಿಲ್ ವಿಭಾಗದ ವಿಸ್ತರಣಾ ಅಧಿಕಾರಿಗಳಾಗಿರುವ ತೇಜಸ್ ಎಂ.ಆರ್. ಹಾಗೂ ರಮೇಶ್ ಎಂ.ಎನ್. ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಯೋಚನಾ ಲಹರಿ ವಿಸ್ತರಣೆ, ಚಿಂತನಾಶೀಲ ಪ್ರವೃತ್ತಿ, ಭಾವನೆಗಳನ್ನು ನಿಯಂತ್ರಿಸುವ ಕಲೆ, ಕರುಣೆ, ಅನುಕಂಪ, ಒತ್ತಡ, ಉದ್ವಿಗ್ನತೆ ನಿವಾರಣೆ, ಒಗ್ಗಟ್ಟಿನಲ್ಲಿ ಕೆಲಸ ನಿರ್ವಹಿಸುವುದು, ಕ್ರಿಯಾಶೀಲತೆಯ ವೃದ್ಧಿ ಮುಂತಾದ ವಿಷಯಗಳ ಕುರಿತು ವಿವಿಧ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಉಪಸ್ಥಿತರಿದ್ದರು. ಗಣಕ ವಿಭಾಗದ ಉಪನ್ಯಾಸಕ ಕೃಷ್ಣ ಪ್ರಸಾದ್ ಸ್ವಾಗತಿಸಿದರು. ಹೆಚ್. ಆರ್. ಡಿ. ಟ್ರೈನಿಂಗ್ ಸೆಲ್ಲಿನ ಸಂಯೋಜಕ ಹಾಗೂ ಕಾಲೇಜಿನ ರಸಾಯನಶಾಸ್ತ್ರದ ಉಪನ್ಯಾಸಕಿ ಚೈತ್ರ ಪ್ರಭು ಕೆ.ಎಸ್. ನಿರೂಪಿಸಿ, ವಂದಿಸಿದರು.