ಬೆಳ್ತಂಗಡಿ: ಡ್ರೀಮ್ ಝೋನ್ ಡ್ಯಾನ್ಸ್ ಕ್ರೀವ್ ನಿಂದ ಜು.6ರಂದು ಸಿ.ವಿ.ಸಿ ಹಾಲ್ ಬೆಳ್ತಂಗಡಿಯಲ್ಲಿ ಜೂನಿಯರ್ ಡ್ಯಾನ್ಸಿಂಗ್ ಸ್ಟಾರ್ – 2025ರ ಫೈನಾಲ್ ರೌಂಡ್ ನಡೆಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನೃತ್ಯ ಕಲಾವಿದರ ಒಕ್ಕೂಟ ಡಿ.ಕೆ. ಇದರ ಉಪಾಧ್ಯಕ್ಷೆ ಶಾರದಾ ದಾಮೋದರ್, ಕಾರ್ಯದರ್ಶಿ ಮೋಹನ್ ಎಸ್. ಹಾಗೂ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿಯ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಮತ್ತು ಕೋಟಿ ಚೆನ್ನಯ್ಯ ಇವೆಂಟ್ ಮತ್ತು ಡೆಕೋರೆಟರ್ ಬೆಳ್ತಂಗಡಿ ಮಾಲಕ ಮನುಸುಮನ್ ಮತ್ತು ತಂಡದ ನೃತ್ಯ ಸಂಯೋಜಕ ಮೋಹಿತ್ ಕುಲಾಲ್ ಡ್ರೀಮ್ ಝೋನ್ ಡ್ಯಾನ್ಸ್ ಕ್ರೀವ್, ವಿದ್ಯಾರ್ಥಿಗಳು ಮತ್ತು ಪೋಷಕರ ವೃಂದ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಡ್ರೀಮ್ ಝೋನ್ ನೃತ್ಯ ತಂಡದ ವಿದ್ಯಾರ್ಥಿಗಳಾದ ಶ್ರೀಪತಿ, ದೀಕ್ಷಿತಾ ಮತ್ತು ಶ್ರಾವ್ಯ ಕಾರ್ಯಕ್ರಮದ ಮೊದಲಿಗೆ ಪ್ರಾರ್ಥಿಸಿದರು. ಚೈತ್ರ, ಶ್ರೀಪತಿ, ಪ್ರಾರ್ಥನಾ, ನೀರಿಕ್ಷಾ ಕಾರ್ಯಕ್ರಮವನ್ನು ನಿರೂಪಿಸಿ, ಶ್ರಾವ್ಯ ಧನ್ಯವಾದವಿತ್ತರು.