ಬೆಳ್ತಂಗಡಿ: ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಅಂದಾಜು ರೂ. 38.50 ಲಕ್ಷದ ಅವಶ್ಯಕತೆ ಇರುವುದರಿಂದ ರುದ್ರಭೂಮಿ ನಿರ್ವಹಣಾ ಸಮಿತಿ ರಚನೆಯು ಶಾಸಕ ಹರೀಶ್ ಪೂಂಜ ಮತ್ತು ಪಟ್ಟಣ ಪಂಚಾಯತಿ ಅಧ್ಯಕ್ಷ ಜಯಾನಂದ ಗೌಡ ರವರ ನೇತೃತ್ವದಲ್ಲಿ ಜು. 7ರಂದು ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಲಾಯಿಲ ಪೈ ಕೇರ್ಸ್ ಮಾಲಕ ಶಶಿಧರ್ ಪೈ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷಯ್ ಇಂಪ್ರೆಷನ್ ನ ಮಾಲಕ ಯಶವಂತ್ ಪಟವರ್ಧನ್, ಕೋಶಾಧಿಕಾರಿಯಾಗಿ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಾಲಕ ಪುಷ್ಪರಾಜ್ ಶೆಟ್ಟಿ, ಉಪಾಧ್ಯಕ್ಷರಾಗಿ ಪದ್ಮ ಕುಮಾರ್, ವಿಶ್ವನಾಥ್ ಶೆಟ್ಟಿ, ಸಂತೋಷ್ ಕುಮಾರ್ ಜೈನ್, ಜೊತೆ ಕಾರ್ಯದರ್ಶಿಯಾಗಿ ದೀಪಕ್ ರಾಜಕೇಸರಿ, ಆಶಾ ಸತೀಶ್, ಸದಸ್ಯರಾಗಿ ಪಟ್ಟಣ ಪಂಚಾಯತ್ ಬೆಳ್ತಂಗಡಿ ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಲೋಕೇಶ್ ಅಂಬರೀಶ್, ಜನಾರ್ಧನ್, ಜಗದೀಶ್ ಡಿ., ರಜನಿ ಕುಡ್ವ, ರಾಜಶ್ರೀ ರಮಣ್, ಮುಸ್ತರ್ ಜಾನ್ ಮೆಹಬೂಬ್, ನಾಮ ನಿರ್ದೇಶಿತ ಸದಸ್ಯರಾದ ಸತೀಶ್ ದೊಡ್ಡಮನಿ, ಬಶೀರ್ ಮತ್ತು ಹೆನ್ರಿ ಲೋಬೊ, ಡಾ. ರಮೇಶ್, ತುಕಾರಾಮ್ ಬಿ., ಸತೀಶ್ ರೈ, ಪ್ರಮೋದ್ ಆರ್. ನಾಯಕ್, ಭುಜಂಗ ಶೆಟ್ಟಿ, ನವೀನ್ ಕುಮಾರ್, ಗಣೇಶ್ ಪೈ, ರೊನಾಲ್ಡ್ ಲೋಬೊ, ಮಂಜುನಾಥ್ ರೈ, ಸತೀಶ್ ಕೆ., ರಾಘವೇಂದ್ರ ಕಿಣಿ, ಮಂಜುನಾಥ್, ಬಿ.ಎಸ್. ಕುಲಾಲ್, ಪ್ರಸಾದ್ ಆಯ್ಕೆಯಾದರು.
ಸಭೆಯಲ್ಲಿ ಹಿಂದೂ ರುದ್ರಭೂಮಿ ಕಟ್ಟಡದ ಹರಿಶ್ಚಂದ್ರ ಕಟ್ಟೆ ರಚನೆಗೆ ರೂ. 2 ಲಕ್ಷ, ಈಶ್ವರನ ಮೂರ್ತಿ ಪುನರುಜ್ಜೀವನಕ್ಕೆ ರೂ. 1ಲಕ್ಷ, ಕಟ್ಟಿಗೆ ದಸ್ತಾನು ಕಟ್ಟಡಕ್ಕೆ ರೂ. 2 ಲಕ್ಷ, ಸ್ನಾನ ಗೃಹ/ಶೌಚ ಗೃಹ ಕಟ್ಟಡ ದುರಸ್ತಿಗೆ ರೂ. 5 ಲಕ್ಷ, ಆವರಣ ಗೋಡೆ ದುರಸ್ತಿ, ಗೇಟ್ ರಚನೆ ಮತ್ತು ನಾಮಫಲಕ ಅಳವಡಿಕೆಗೆ ರೂ. 15 ಲಕ್ಷ, ಹೈ ಮಾಸ್ಟ್ ದೀಪ ಅಳವಡಿಕೆಗೆ ರೂ. 2.5 ಲಕ್ಷ, ನೀರಿನ ವ್ಯವಸ್ಥೆಗೆ ರೂ. 1 ಲಕ್ಷ, ರುದ್ರಭೂಮಿ ಕಟ್ಟಡದ ಎದುರುಭಾಗದಲ್ಲಿ ಜಿಐ ಶೀಟು ಮೇಲ್ಛಾವಣಿ ರಚನೆಗೆ ರೂ. 10 ಲಕ್ಷ ಸೇರಿದಂತೆ ಬಾಕಿಯಿರುವ ಕಾಮಗಾರಿಗೆ ಒಟ್ಟು ಅಂದಾಜು ರೂ. 38.50 ಲಕ್ಷದ ಅವಶ್ಯಕತೆ ಇರುವ ಬಗ್ಗೆ ಚರ್ಚಿಸಲಾಯಿತು.