ಶಾಸಕ ಪೂಂಜ ವಿರುದ್ಧ ರಕ್ಷಿತ್ ಶಿವರಾಂ ವಾಗ್ಧಾಳಿ-10ಕೋಟಿ ಬಿಡುಗಡೆ ಆಗಿದ್ರೂ ಕ್ರೀಯಾಯೋಜನೆ ಮಾಡಿಲ್ಲ ಯಾಕೆ-ಎರಡು ವರ್ಷದಿಂದ ಬೆಳ್ತಂಗಡಿ ಕೆಡಿಪಿ ಸಭೆ ಮಾಡದ ಭೂಪ-ಸುದ್ದಿಗೋಷ್ಠಿಯಲ್ಲಿ ಆರೋಪ

0

ಬೆಳ್ತಂಗಡಿ: ಸರ್ಕಾರದ ವಿರುದ್ಧ ಸುಳ್ಳು ಹೇಳುವುದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರದ್ದು ಚಾಳಿಯಾಗಿದೆ. ಹರೀಶ್ ಪೂಂಜರವರು ರಸ್ತೆಗಾಗಿ ಬೀದಿಗಿಳಿದಿದ್ದಕ್ಕೆ ಅಭಿನಂದನೆ ಸಲ್ಲಿಸಬೇಕಿದೆ. ಯಾಕಂದ್ರೆ ಎರಡು ವರ್ಷದಲ್ಲಿ ಲವ್ ಜಿಹಾದ್ ಭಾಷಣ, ಸಚಿವರ ಹೆಂಡತಿಯ ಬಗ್ಗೆ ಹೇಳಿಕೆ, ಯಾರು ಎಷ್ಟು ಮಕ್ಕಳನ್ನು ಹುಟ್ಟಿಸಬೇಕು, ಲೋಫರ್ ಅಂತೆಲ್ಲ ಬೈಯ್ಯುವುದು, ಅರಣ್ಯ ಅಧಿಕಾರಿಗಳ ಜೊತೆ ಫೈಟು, ಪೊಲೀಸ್ ಸ್ಟೇಷನ್ ನಲ್ಲಿ ಇತ್ಯಾದಿಗಳನ್ನು ಮಾಡಿಕೊಂಡು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಕೇಸ್ ಮಾಡಿಸಿಕೊಂಡಿದ್ದೇ ಸಾಧನೆ ಎಂದು ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ವಾಗ್ಧಾಳಿ ನಡೆಸಿದ್ದಾರೆ.

ಬೆಳ್ತಂಗಡಿಯ ಸಂತೆಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಕ್ಷಿತ್ ಶಾಸಕರ ವಿರುದ್ಧ ಆರೋಪಗಳ ಸುರಿಮಳೆಗೈದರು. ರಾಜ್ಯ ಸರ್ಕಾರ ಮಳೆ ಹಾನಿ ಹಿನ್ನಲೆ ದ.ಕ. ಜಿಲ್ಲೆಗೆ 70 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.‌ಇದರಲ್ಲಿ ಬೆಳ್ತಂಗಡಿಗೆ ಹತ್ತು ಕೋಟಿ ರೂಪಾಯಿ ಇದ್ದರೂ ಇದಕ್ಕೆ ಶಾಸಕರು ಯಾವುದೇ ಕ್ರೀಯಾಯೋಜನೆ ಮಾಡಿಲ್ಲ ಎಂದರು. ಸುಳ್ಯ,ಪುತ್ತೂರುಗಳಲ್ಲಿ ಹತ್ತು ಕೋಟಿ ಬಳಸಿ ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಿದ್ದಾರೆಂದು ತಿಳಿಸಿದರು.

ಪುರಿಯ ಕುಕ್ಕೇಡಿ ರಸ್ತೆಯ ರಿಪೇರಿ ಬಗ್ಗೆ ಅಧಿಕಾರಿಗಳು ಹೋದಾಗ, ಶಾಸಕರು ಬೇರೆ ಇಲಾಖೆಯಿಂದ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದ್ದರಿಂದ ನಾವು ಹೋಗಿಲ್ಲ ಅಂತ ತಿಳಿಸುತ್ತಾರೆ. ನನ್ನನ್ನು ಆಮದು ಅಂತೀರಿ, ಆದರೆ ನೀವು ದಿಢೀರ್ ಮಾಯವಾಗ್ತೀರಿ,ಜಾಸ್ತಿ ಬೆಂಗಳೂರಿನಲ್ಲಿದ್ದೀರಿ ಅಂತ ಶಾಸಕರಿಗೆ ರಕ್ಷಿತ್ ಕುಟುಕಿದರು. ಕಳೆಂಜದಲ್ಲಿ 309ಸರ್ವೆ ನಂಬರ್ ನಡಿಯ ವಿವಾದ ಬಗೆಹರಿಸಲು ಕಂದಾಯ ಅರಣ್ಯ ಇಲಾಖೆಯ ಜಂಟಿ ಸರ್ವೆ ಆಗಬೇಕಿದೆ. ಶಾಸಕರ ಉಪಸ್ಥಿತಿಯಲ್ಲಿ ಸರ್ವೇ ಆಗಬೇಕಾಗಿದೆ, ಆದರೆ ಶಾಸಕರು ಸಮಯ ನೀಡುತ್ತಿಲ್ಲ ಎಂದರು.

ಬೆಳ್ತಂಗಡಿಯಲ್ಲಿ ಎರಡು ವರ್ಷದಿಂದ ಕೆಡಿಪಿ ಸಭೆ ಮಾಡದ ಭೂಪ ಶಾಸಕ ಎಂದರು. ಕಾಂಗ್ರೆಸ್ ಸರ್ಕಾರ ನಿನ್ನಿಕಲ್ ಸಬ್ ಸ್ಟೇಷನ್ ಗೆ 26ಕೋಟಿ, ಕುತ್ಲೂರುಗೆ 25ಕೋಟಿ ಅನುದಾನವಿಟ್ಟಿದೆ ಎಂದರು.ಸರ್ಕಾರ ಬೆಳ್ತಂಗಡಿ ನ್ಯಾಯಾಲಯ ಕಟ್ಟಡಕ್ಕೆ 9ಕೋಟಿ ಬಿಡುಗಡೆ ಮಾಡಿದೆ. ಕೆ ಎಸ್ ಆರ್ ಟಿ ಸಿ ಪುತ್ತೂರು ವಿಭಾಗಕ್ಕೆ 326ಡ್ರೈವರ್ ಕಂಡಕ್ಟರ್ ನೇಮಕಾತಿಯಾಗಿದೆ. ಅದರಲ್ಲಿ ಬೆಳ್ತಂಗಡಿಗೆ 100 ಡ್ರೈವರ್ ಕಂಡಕ್ಟರ್ ಸೇವೆ ಸಿಗಲಿದೆ..ಶಾಸಕರು ದೊಡ್ಡ 3000 ಕೋಟಿ ಅನುದಾನ ತಂದಿದ್ದಾರೆ ಅನ್ನುವುದು ಪತ್ರಕ್ಕೆ ಮೀಸಲು, ಟೆಂಡರ್ ಆಗಿಲ್ಲ, ಬಿಲ್ ಕೂಡ ಆಗಿಲ್ಲ ಎಂದು ತಿಳಿಸಿದರು.

ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆ NH 73,75 ರಸ್ತೆಯ ಕನೆಕ್ಟಿಂಗ್ ರಸ್ತೆ, ಇದರ ಅಭಿವೃದ್ಧಿಗೆ ಸಂಸದರು,ಶಾಸಕರು ಗುರುವಾಯನಕೆರೆಯಲ್ಲಿ ಉದ್ಘಾಟಿಸಿ 10ಕಿಲೋಮೀಟರ್ ಗೆ ನಿಲ್ಲಿಸಿದ್ದಾರೆ. ಯಾಕೆ ಉಪ್ಪಿನಂಗಡಿ ತನಕ ಮಾಡಲು ಕೇಂದ್ರ ಸರ್ಕಾರದಲ್ಲಿ ಹಣವಿಲ್ವಾ,ಹೆಚ್ಚುವರಿ 5ಕೋಟಿ ತರಲು ಆಗಿಲ್ವಾ ಎಂದು ಪ್ರಶ್ನಿಸಿದರು. ಶಾಸಕರು ಬೀದಿಗಿಳಿದು ಪ್ರತಿಭಟನೆ ಮಾಡುವುದಲ್ಲ,ಸದನದಲ್ಲಿ ಮಾತಾಡಬೇಕು, ಸಚಿವರೆದುರು ಮಾತಾಡಬೇಕು, ಆದರೆ ಅವರ ಬಚ್ಚಲು ಬಾಯಿ ಹರಿಬಿಟ್ಡಿದ್ದರಿಂದ ಅವರೆದುರು ನಿಲ್ಲಲು ಮುಖವಿಲ್ಲ ಎಂದರು.

ಶಾಸಕರು ಎಲ್ಲೇ ಭಾಷಣ ಮಾಡಿದ್ರೂ ಕೋಮು ಪ್ರಚೋದನೆಯ ಮಾತುಗಳು ಇರುತ್ತಿದ್ದವು. ಆದರೆ ಹೊಸ ಎಸ್.ಪಿ. ಬಂದ ನಂತರ ಅವರಿಗೂ ಭಯವಾಗಿದೆ, ಕೋಮು ಪ್ರಚೋದನೆ ನಿಂತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿಯಲ್ಲಿರುವವರು. ಬ್ಲಾಕ್ ಕಾಂಗ್ರೆಸ್ ಸಮಿತಿ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್, ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ , ಪ.ಪಂ‌ ಸದಸ್ಯ ಜಗದೀಶ್, ಕೆಪಿಸಿಸಿ ಸದಸ್ಯ ಕೇಶವ ಪಿ ಬೆಳಾಲು, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಮಿತಾ ಕೆ. ಪೂಜಾರಿ, ಕಾಂಗ್ರೆಸ್ ಅಲ್ಪಸಂಖ್ಯಾತ ಗ್ರಾಮೀಣ ಘಟಕಾಧ್ಯಕ್ಷ ಪಿ.ಟಿ. ಸೆಬಾಸ್ಟಿನ್, ಮಹಿಳಾ ಗ್ರಾಮೀಣ ಸಮಿತಿಯ ಅಧ್ಯಕ್ಷೆ ಶೋಭಾ ನಾರಾಯಣಗೌಡ, ತಾಲೂಕು ಅಕ್ರಮಸಕ್ರಮ ಸಮಿತಿಯ ಅಯೂಬ್ ಡಿ.ಕೆ., ಯುವ ಕಾಂಗ್ರೆಸ್ ಬೆಳ್ತಂಗಡಿಯ ಅಧ್ಯಕ್ಷ ಮಹಮ್ಮದ್ ಅಜರ್, ಯುವಕಾಂಗ್ರೆಸ್ ಬೆಳ್ತಂಗಡಿಯ ಅಧ್ಯಕ್ಷ ಹಕೀಂ ಕೊಕ್ಕಡ, ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ರೋಯಿ ಪುದುವೆಟ್ಟು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here