ನಾಳ: ಟೆಕ್ಸಾಸ್ ಇನ್ಸುಮೆಂಟ್ಸ್ ಕಂಪೆನಿ ಬೆಂಗಳೂರು ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಯನ್ನು ದೀಪಕ್, ಪ್ರಮಿತ್, ಆರ್ಯನ್ ರವರು ಕಂಪೆನಿಯಿಂದ ವಿತರಿಸಿದರು. ಹಾಗೆಯೇ ಶಿಕ್ಷಕರಿಗೆ ಮತ್ತು ಅಡುಗೆ ಸಿಬ್ಬಂದಿಯವರಿಗೆ ನೀರಿನ ಬಾಟಲಿಯನ್ನು ಕೊಡುಗೆಯಾಗಿ ನೀಡಿದರು.
ಸಹಶಿಕ್ಷಕಿ ಸಿಸಿಲಿಯಾ ಫ್ಲಾವಿಯಾಡಿಕೋಸ್ತ, ಜಲಜಾಕ್ಷಿ ಪಿ. ಹಾಗೂ ಇಂದುಶ್ರೀ ರೈ ಹೆಚ್. ಅವರು ಸಹಕರಿಸಿದರು. ಶಾಲಾವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೊಡುಗೆ ನೀಡಲು ಸಹಕರಿಸಿದ ಶಾಲಾ ಹಿರಿಯ ವಿದ್ಯಾರ್ಥಿ ಹರೀಶ್ ರಾವ್ ನಾಳ ಹಾಗೂ ಅವರ ಸಹೋದರ ಚಂದ್ರಶೇಖರವರಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಪಿಲಿಪ್ ರೊನಾಲ್ಡ್ ಡಿಮೆಲ್ಲೊ ಸ್ವಾಗತಿಸಿದರು. ಶಾಲಾ ಸಹಶಿಕ್ಷಕಿ ದಮಯಂತಿ ಎಂ. ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಕವಿತಾ ಧನ್ಯವಾದ ಸಲ್ಲಿಸಿದರು.