ಬೆಳಾಲು: ಮಾಯ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ತಿಗೆ 2025-26ನೇ ಸಾಲಿಗೆ ಚುನಾವಣೆ ನಡೆದಿದ್ದು, ಮುಖ್ಯ ಮಂತ್ರಿಯಾಗಿ 8ನೇ ತರಗತಿ ವಿದ್ಯಾರ್ಥಿ ಶ್ರವಣ್ ಪಿ. ಹಾಗೂ ಉಪಮುಖ್ಯಮಂತ್ರಿ ಆಗಿ ಎನ್. ಮುಹಮ್ಮದ್ ಸುಹೈದ್ 7 ನೇ ಆಯ್ಕೆಯಾಗಿದ್ದಾರೆ.
ಮೊಬೈಲ್ ತಂತ್ರಾಂಶದ ತಂತ್ರಜ್ಞಾನ ಬಳಸಿಕೊಂಡು ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ನೈಜ ಚುನಾವಣೆಯ ಅನುಭವ ನೀಡುತ್ತಾ ಬಂದಿರುವ ಶಾಲಾ ಸಂಸತ್ತು ಚುನಾವಣೆಯಲ್ಲಿ ಗೃಹಮಂತ್ರಿಯಾಗಿ ತೇಜಸ್ 8ನೇ, ವಿದ್ಯಾ ಮಂತ್ರಿಯಾಗಿ ಭವಿಕಾ ಪಿ. 8ನೇ, ಸಾಂಸ್ಕೃತಿಕ ಮಂತ್ರಿಯಾಗಿ ದೀಕ್ಷಾ 8ನೇ ಇವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಉಳಿದಂತೆ ಆರೋಗ್ಯ ಮಂತ್ರಿಯಾಗಿ ನವ್ಯಶ್ರೀ 7ನೇ, ತೋಟಗಾರಿಕಾ ಮಂತ್ರಿಯಾಗಿ ನಮೃತ್ 8ನೇ, ನೀರಾವರಿ ಮಂತ್ರಿಯಾಗಿ ಲೋಕೇಶ್ ನಾಯ್ಕ 8ನೇ, ಸ್ವಚ್ಛತಾಮಂತ್ರಿಯಾಗಿ ಹರ್ಷಿಣಿ 7ನೇ , ಆಹಾರ ಮಂತ್ರಿಯಾಗಿ ನಿಶಾನ್ 7ನೇ, ಕ್ರೀಡಾ ಮಂತ್ರಿಯಾಗಿ ರಕ್ಷಿತ್ 8ನೇ ಹಾಗೂ ವಿರೋಧ ಪಕ್ಷದ ನಾಯಕನಾಗಿ ಶಶಿಧರ 8ನೇ ಆಯ್ಕೆಯಾಗಿದ್ದಾರೆ. ಇವರೆಲ್ಲರಿಗೂ ಮುಖ್ಯ ಶಿಕ್ಷಕ ವಿಠಲ್ ಎಂ. ಜು.2ರಂದು ಪ್ರಮಾಣ ವಚನ ಬೋಧಿಸಿದರು.
ಶಾಲಾ ಸಂಸತ್ತು ಚುನಾವಣಾ ಕಾರ್ಯದಲ್ಲಿ ಶಿಕ್ಷಕಿಯರಾದ ಝಾನ್ಸಿ ಸಿ.ವಿ., ಜ್ಯೋತಿ ಎಂ.ಎಸ್. ಅತಿಥಿ ಶಿಕ್ಷಕಿ ಪ್ರಜ್ಞಾ ಸಹಕರಿಸಿದರು. ಜಿಪಿಟಿ ಶಿಕ್ಷಕ ಯೋಗೇಶ್ ಹೆಚ್.ಆರ್. ಮೊಬೈಲ್ ಇ.ವಿ.ಎಂ. ಬಳಕೆಯೊಂದಿಗೆ ಚುನಾವಣೆ ಆಯೋಜಿಸಿದ್ದರು.