ಓಡೀಲು: ವಿಜಯ ರತ್ನ 2025 ಪ್ರಶಸ್ತಿ ವಿಜೇತರಾದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಗೌರವಾರ್ಪಣೆ ಮಾಡಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಿನೇಶ್ ಮೂಲ್ಯ, ಸದಸ್ಯರಾದ ಗೋಪಿನಾಥ್ ನಾಯಕ್, ಸತೀಶ್ ಬಂಗೇರ, ಶಾಂಭವಿ ಬಂಗೇರ, ಹರಿಪ್ರಸಾದ್ ಇರ್ವತ್ರಾಯ ಹಾಗೂ ರಾಜು ಪಡಂಗಡಿ ಉಪಸ್ಥಿತರಿದ್ದರು.