ಬೆಳ್ತಂಗಡಿ: ಪಡಂಗಡಿ ಗ್ರಾಮದ ಅಚ್ಚಿನ್ ಎಂಬಲ್ಲಿಂದ ಪೇರಣವಂಜ ತನಕ ರಸ್ತೆ ಗುಂಡಿಗಳನ್ನು ಶ್ರಮದಾನದ ಮೂಲಕ ಸಾರ್ವಜನಿಕರು ಮುಚ್ಚುವ ಮೂಲಕ ಮಾದರಿಯಾಗಿದ್ದಾರೆ. ರಸ್ತೆಯ ಗುಂಡಿಗಳನ್ನು ಸರಿ ಮಾಡಲು ಕಾಂಕ್ರೀಟ್ ಜಲ್ಲಿ ಮಿಕ್ಸನ್ನು ಸಾನಿಧ್ಯ ರೆಡಿ ಮಿಕ್ಸ್ ಪೆರಣವಂಜ ಅವರು ನೀಡಿ ಸಹಕರಿಸಿದರು. ಸಂತೋಷ್ ಕುಮಾರ್ ಜೈನ್, ಅಹ್ಮದ್ ಭಾವ, ರಿಚರ್ಡ್ ಗೋವಿಯಾಸ್, ಚಂದ್ರಕಾಂತ್ ಜೈನ್, ಸುರೇಶ್ ಮಣಿಕಂಠ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಫಾನ ಈ ವೇಳೆ ಭೇಟಿ ನೀಡಿದರು.