ಧರ್ಮಸ್ಥಳ ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್ ಕೆಜಿಯಿಂದ ಎರಡನೇ ತರಗತಿವರೆಗಿನ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮನಶಾಸ್ತ್ರ ವಿಭಾಗದ ಉಪನ್ಯಾಸಕಿ ಅಶ್ವಿನಿ ಹೆಚ್. ಆಗಮಿಸಿ ಮಕ್ಕಳ ದೈಹಿಕ ಬೆಳವಣಿಗೆಗೆ ಬೇಕಾದ ಆಹಾರ ಕ್ರಮ, ಮಕ್ಕಳ ಮಾನಸಿಕ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳು, ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಎಷ್ಟು ಮುಖ್ಯ ಎಂಬುದರ ಕುರಿತಾಗಿ ಸವಿವರವಾದ ಮಾಹಿತಿಯನ್ನು ಪೋಷಕರಿಗೆ ನೀಡಿದರು. ಕರಡಿಪಾಥ್ ತರಗತಿಗಳ ತರಬೇತುದಾರ ನಿಖಿಲ್ ಕರಡಿಪಾಥ್ ತರಗತಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.

ಶಾಲಾ ಮುಖ್ಯೋಪಾಧ್ಯಾಯನಿ ಪರಿಮಳ ಎಂ.ವಿ. ಶಾಲಾ ರೀತಿ ನೀತಿಗಳನ್ನು ವಿವರಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಕ್ಕಳನ್ನು ಕಬ್ ಬುಲ್ ಬುಲ್ ದಳಕ್ಕೆ ಸೇರಿಸುವ ಕುರಿತಾಗಿ ಶಾಲೆಯ ಫ್ಲಾಕ್ ಲೀಡರ್ ಸೌಮ್ಯ ಮಾಹಿತಿ ನೀಡಿದರು. ಪುಟಾಣಿ ಮಕ್ಕಳ ಕಾಳಜಿಗಳ ಕುರಿತಾಗಿ ಹಾಗೂ ಬನ್ನಿ ದಳದ ಬಗ್ಗೆ ಪ್ರೀತಿ ತಿಳಿ ಹೇಳಿದರು. ತರಗತಿ ಶಿಕ್ಷಕರುಗಳು ತಮ್ಮ ಪರಿಚಯವನ್ನು ಪೋಷಕರಿಗೆ ಮಾಡಿದರು. ಶಾಲಾ ಶಿಕ್ಷಕಿl ಗೀತಾ ಅವರು ನಿರೂಪಿಸಿ, ಪ್ರೀತಿ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here