ಮೂಡುಕೋಡಿ ಬ್ರಹ್ಮ ಬೈದರ್ಕಳ ತಾವು ಬಳಿ ಸೋಲಾರ್ ದೀಪ ಉದ್ಘಾಟನೆ

0

ವೇಣೂರು: ಗ್ರಾಮ ವ್ಯಾಪ್ತಿಯ ಮೂಡುಕೋಡಿ ಕೊಳಂಗಜೆ ಬ್ರಹ್ಮ ಬೈದರ್ಕಳ ತಾವು ಬಳಿ ಗ್ರಾಮ ಪ೦ಚಾಯತ್ ಅನುದಾನದಿಂದ ನಿರ್ಮಿಸಿದ ಸೋಲಾರ್ ದೀಪವನ್ನು ಉದ್ಘಾಟಿಸಲಾಯಿತು. ಗ್ರಾಮ ಪ೦ಚಾಯತ್ ಹಿರಿಯ ಸದಸ್ಯ ಲೋಕಯ್ಯ ಪೂಜಾರಿ ಸರಕಾರದ ಅನುದಾನವನ್ನು ಜನಸಾಮನ್ಯರಿಗೆ ಪಕ್ಷ ಭೇಧ ಮರೆತು ತಲುಪಿಸುವ ಸದಾ ಅವಕಾಶ ಇರುವುದು ಪ೦ಚಾಯತ್ ಸದಸ್ಯರಿಗೆ ಮಾತ್ರ ಇದರಿ೦ದ ನಾವು ಜನರಿಗೆ ಹತ್ತಿರವಾಗುತ್ತೇವೆ ಎ೦ದರು.

ಮೂಡುಕೋಡಿ ಗ್ರಾಮ ಪಂಚಾಯತ್ ಸದಸ್ಯ ಅನೂಪ್ ಜೆ.ಪಾಯಸ್ ಮಾತನಾಡಿ ವಿದ್ಯುತ್ ಉಳಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಯೋಚಿಸುತಿದ್ದು ಎಲ್ಲಾ ಸದಸ್ಯರ ಸಹಕಾರದಿಂದ ಮೂಡುಕೋಡಿಯಲ್ಲಿ ಅತೀ ಹೆಚ್ಚು ಸೋಲಾರ್ ದೀಪ ಅಳವಡಿಸಿದ್ದೇವೆ ಎಂದರು. ಮೂಡಬಿದ್ರೆಯ ನ್ಯಾಯವಾದಿ ನಾಗೇಶ್ ಶೆಟ್ಟಿ ಡಿ. ಮಾತನಾಡಿ ಪಂಚಾಯತ್ ಸದಸ್ಯರ ಜನಪರ ಕೆಲಸಗಳು ಎಲ್ಲರೂ ಮೆಚ್ಚುವಂತದ್ದು ಆಗಿದೆ ಎಂದರು. ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಜೆಸ್ಸಿ ಟೀಚರ್, ಕಂಬಳದ ಕೋಣಗಳ ಯಜಮಾನ ಪುರೋಹಿತ ಗಣೇಶ್ ನಾರಾಯಣ ಪಂಡಿತ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜೇಶ್ ಪೂಜಾರಿ ಮೂಡುಕೋಡಿ, ಹಿರಿಯರಾದ ವಾಸು ಪೂಜಾರಿ ಕೊಳಂಗಜೆ ಅಮೃತಧಾರ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶಶಿಧರ ಶೆಟ್ಟಿ ನಾರಡ್ಕ, ದೈಹಿಕ ಶಿಕ್ಷಣ ಶಿಕ್ಷಕ ವಸಂತ ಹೆಗ್ದೆ ಹಲೆಕ್ಕಿ ಅರವಿಂದ ಶೆಟ್ಟಿ, ಜಯಶ್ರೀ ಖಂಡಿಗ ಪ್ರವೀಣ್ ಕುಮಾರ್ ಜಾರಿಗೆದಡಿ ಹೊಸಪಟ್ನ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಈ ವೇಳೆ ಸ್ಥಳಿಯರು ಗ್ರಾಮ ಸದಸ್ಯ ಅನೂಪ್ ಜೆ. ಪಾಯಸ್ ಅವರನ್ನು ಸನ್ಮಾನಿಸಿದರು. ಸ್ಥಳಿಯ ಮುಖಂಡ ಸುದರ್ಶನ ಕೋಟ್ಯಾನ್ ಕೊಳಂಗಜೆ ಸ್ವಾಗತಿಸಿ, ಬೆಳ್ತಂಗಡಿ ಗುರುದೇವ ಕಾಲೇಜಿನ ಉಪನ್ಯಾಸಕ ರಾಕೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here