
ಕಳೆಂಜ: ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಕಳೆಂಜ ಗ್ರಾಮಪಂಚಾಯತ್ ಮುಂಬಾಗ ಜೂ. 23ರಂದು ಪ್ರತಿಭಟನೆ ನಡೆಯಿತು. 9/11 ನಿವೇಶನಗಳ ಸಮಸ್ಯೆಗಳು, ಅಕ್ರಮ ಸಕ್ರಮ ಸಮಸ್ಯೆಗಳು, ಬಡವರ ಆಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆ ಸಮಸ್ಯೆ ವೃದ್ಧಾಪ್ಯ ವೇತನ ಸಂಧ್ಯಾ ಸುರಕ್ಷಾ ಹಣ ಬಿಡುಗಡೆ ಸಮಸ್ಯೆ, ಬಿಪಿಎಲ್ ಕಾರ್ಡ್ ರದ್ದುಗೊಳಿಸಿದರ ಕುರಿತಾಗಿ ನಡೆದ ಪ್ರತಿಭಟನೆಯಲ್ಲಿ ಶಕ್ತಿ ಕೇಂದ್ರ ಅಧ್ಯಕ್ಷ ಧನಂಜಯ ಗೌಡ ಪ್ರಭಾರಿ, ಪ್ರೀತಮ್ ಧರ್ಮಸ್ಥಳ, ತಾಲೂಕು ಎಸ್.ಟಿ. ಮೋರ್ಚಾ ಅಧ್ಯಕ್ಷ ರಾಜೇಶ್, ನಿಡ್ಡಾಜೆ ಪಂಚಾಯತ್ ಅಧ್ಯಕ್ಷೆ ಗಿರಿಜ, ಉಪಾಧ್ಯಕ್ಷ ಮಂಜುನಾಥ್ ಗೌಡ ಹಾರಿತ್ತ ಕಜೆ, ಧರ್ಮಸ್ಥಳ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಕೆ.ಬಿ., ಪಂಚಾಯತ್ ಮಾಜಿ ಅಧ್ಯಕ್ಷ ಪ್ರಸನ್ನ, ಪಂಚಾಯತ್ ನ ಬಿಜೆಪಿ ಸದಸ್ಯರು, ಕಾರ್ಯಕರ್ತರು, ಮಿಲ್ಕ್ ಸೊಸೈಟಿ ಅಧ್ಯಕ್ಷರುಗಳು, ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದು, ಪ್ರತಿಭಟನಾ ವಿಷಯದ ಮನವಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ನೀಡಿದರು.